HomeEntertainment'ಕೆಟಿಎಂ' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ಕೆಟಿಎಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ದೀಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ‘ಕೆಟಿಎಂ’ ಸಿನಿಮಾದ ‘ಸೋಜಿಗ ಸೋಜಿಗ’ ಎಂಬ ಹಾಡು ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಕೇಳುಗರ ಗಮನ ಸೆಳೆದಿದೆ.

ಖ್ಯಾತ ಗಾಯಕ ಸಂಜೀವ್ ಹೆಗಡೆ ಧ್ವನಿಯಲ್ಲಿ ಸೊಗಸಾಗಿ ಮೂಡಿ ಬಂದಿರುವ ಈ ಹಾಡಿಗೆ ಚೇತನ್ ರಾವ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.ಇನ್ನುಳಿದಂತೆ ಅರಸು ಅವರ ಸಾಹಿತ್ಯವಿದೆ.

ಈ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಸಂಜನಾ ದಾಸ್ ಹಾಗೂ ಕಾಜಲ್ ಕುಂದಾರ್ ಮುಖ್ಯ ಭೂಮಿಕೆಯಲ್ಲಿದ್ದು, ವಿನಯ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ನವೀನ್ ಕುಮಾರ್ ಛಾಯಾಗ್ರಹಣ, ಮತ್ತು ಅಭಿನಂದನ್ ಡೈಲಾಗ್ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular