HomeKarnatakaBreaking News: ಚಂದ್ರ ಗ್ರಹಣ, ಧರ್ಮಸ್ಥಳದ ಭಕ್ತರಿಗೆ ವಿಶೇಷ ಸೂಚನೆ

Breaking News: ಚಂದ್ರ ಗ್ರಹಣ, ಧರ್ಮಸ್ಥಳದ ಭಕ್ತರಿಗೆ ವಿಶೇಷ ಸೂಚನೆ

ಈ ವರ್ಷದ ಮೊದಲ ಸಂಪೂರ್ಣ ಚಂದ್ರ ಗ್ರಹಣ ಮಾರ್ಚ್ 3ರಂದು ನಡೆಯಲಿದೆ. ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸುವ ಚಂದ್ರ ಗ್ರಹಣದ ಕಾರಣಕ್ಕೆ ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳಲ್ಲಿ ಕೆಲವು ಬದಲಾವಣೆಗಳು ಆಗಲಿವೆ.

ಚಂದ್ರ ಗ್ರಹಣದ ಮಂಗಳವಾರ ಮಧ್ಯಾಹ್ನ 3:20ಕ್ಕೆ ಆರಂಭವಾಗಲಿದೆ. ಸಂಜೆ 6:47ಕ್ಕೆ ಕೊನೆಗೊಳ್ಳಲಿದೆ.  3 ಗಂಟೆ 27 ನಿಮಿಷದ ಅವಧಿಯ ಗ್ರಹಣದ ಹಿನ್ನಲೆಯಲ್ಲಿ ದೇವಾಲಯಗಳ ದರ್ಶನದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.

ದಕ್ಷಿಣದ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಈ ಕುರಿತು ಪ್ರಕಟಣೆ ಮೂಲಕ ಭಕ್ತರಿಗೆ ಮಾಹಿತಿ ನೀಡಿದೆ. ಮಾರ್ಚ್‌ 3ರ ಮಂಗಳವಾರ ದೇವರ ದರ್ಶನದಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಭಕ್ತರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವಾಲಯದ ಪ್ರಕಟಣೆ: ಶ್ರೀ ಕ್ಷೇತ್ರ ಧರ್ಮಸ್ಥಳ, ಭಕ್ತಾದಿಗಳ ಗಮನಕ್ಕೆ. ದಿನಾಂಕ 3/3/2026 ಮಂಗಳವಾರ ಚಂದ್ರಗ್ರಹಣ ಇರುವುದರಿಂದ ದೇವರ ದರ್ಶನ ಸಮಯದಲ್ಲಿ ವ್ಯತ್ಯಯವಾಗಲಿದೆ.

ಬೆಳಿಗ್ಗೆ 6.30 ರಿಂದ 1.30 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರುತ್ತದೆ. ರಾತ್ರಿ 7.30 ಗಂಟೆಯ ನಂತರ ಎಂದಿನಂತೆ ದೇವರ ದರ್ಶನ ನಡೆಯಲಿದೆ. ಭಕ್ತಾದಿಗಳು ಸಹಕರಿಸಬೇಕಾಗಿ ವಿನಂತಿ ಎಂದು ಪ್ರಕಟಣೆ ಹೇಳಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular