HomeBusinessಶುಭ ಸುದ್ದಿ: 400 ರೂ. ಇಳಿಕೆಯಾಯ್ತು LPG ಸಿಲಿಂಡರ್ ದರ: ಇಲ್ಲಿದೆ ಮಾಹಿತಿ

ಶುಭ ಸುದ್ದಿ: 400 ರೂ. ಇಳಿಕೆಯಾಯ್ತು LPG ಸಿಲಿಂಡರ್ ದರ: ಇಲ್ಲಿದೆ ಮಾಹಿತಿ

ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 200 ರೂ. ಕಡಿತಗೊಳಿಸಲಾಗಿದ್ದು, ಪ್ರತಿ ಕುಟುಂಬಕ್ಕೂ ದೊಡ್ಡ ಪರಿಹಾರವಾಗಿದೆ. ಈ ನಿರ್ಧಾರದಿಂದ ದೇಶಾದ್ಯಂತ ಸುಮಾರು 33 ಕೋಟಿ ಗ್ರಾಹಕರಿಗೆ ಲಾಭವಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಈ ನಿರ್ಧಾರದ ಮೂಲಕ ಪ್ರಧಾನಿ ಮೋದಿ ದೇಶದ ಕೋಟ್ಯಂತರ ಸಹೋದರಿಯರಿಗೆ ರಕ್ಷಾ ಬಂಧನ ಮತ್ತು ಓಣಂ ಉಡುಗೊರೆ ನೀಡಿದ್ದಾರೆ. ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಜ್ವಲ ಯೋಜನೆಯಡಿ ಫಲಾನುಭವಿಗಳು ಸೇರಿದಂತೆ ಎಲ್‌ಪಿಜಿ ಗ್ರಾಹಕರಿಗೆ ಪ್ರತಿ ಸಿಲಿಂಡರ್‌ಗೆ ರೂ 200 ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ದೇಶಾದ್ಯಂತ ಸುಮಾರು 33 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳ ಗ್ರಾಹಕರಿಗೆ ಪ್ರಯೋಜನವಾಗಲಿದೆ.

ಉಜ್ವಲ ಯೋಜನೆಯ ಎಲ್‌ಪಿಜಿ ಗ್ರಾಹಕರಿಗೂ ಇದು ಅನ್ವಯವಾಗಲಿದೆ. ಮಾಹಿತಿಯ ಪ್ರಕಾರ, ಉಜ್ವಲ ಯೋಜನೆಯ ಗ್ರಾಹಕರು ಈಗಾಗಲೇ ಪ್ರತಿ ಸಿಲಿಂಡರ್‌ಗೆ 200 ರೂ. ಸಬ್ಸಿಡಿ ಪಡೆಯುತ್ತಿದ್ದರು. 200 ರೂ. ಹೆಚ್ಚುವರಿ ಬೆಲೆ ಕಡಿತದ ನಂತರ ಸಬ್ಸಿಡಿ 400 ರೂ.ಗೆ ಹೆಚ್ಚಳ ಆಗಲಿದೆ. ಅಂದರೆ ಸಿಲಿಂಡರ್ ಗೆ 400 ರೂ. ಕಡಿಮೆಯಾಗಲಿದೆ.

ಇನ್ನು ಉಜ್ವಲ ಫಲಾನುಭವಿಗಳಿಗೆ 700 ರೂ.ಗೆ ಅಡುಗೆ ಅನಿಲ ಸಿಗಲಿದ್ದು, ಉಳಿದ ಎಲ್ಲ ಗ್ರಾಹಕರಿಗೆ 900 ರೂ.ಗೆ ಅಡುಗೆ ಅನಿಲ ಸಿಗಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular