HomeKarnatakaಪ್ರೇಮಿಗಳ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖತರ್ನಾಕ್ ಜೋಡಿ; ಹೋಟೆಲ್ ಒಡತಿ ಸೇರಿ ಇಬ್ಬರು...

ಪ್ರೇಮಿಗಳ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖತರ್ನಾಕ್ ಜೋಡಿ; ಹೋಟೆಲ್ ಒಡತಿ ಸೇರಿ ಇಬ್ಬರು ಅರೆಸ್ಟ್

ಬೆಂಗಳೂರು: ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಹೋಟೆಲ್ ಒಡತಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಯನಾ ಹಾಗೂ ಕಿರಣ್ ಬಂಧಿತ ಆರೋಪಿಗಳು. ಆರೋಪಿ ನಯನಾ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಹೋಟೆಲ್ ನಡೆಸುತ್ತಿದ್ದು, ಪ್ರೇಮಿಗಳಿಗೆ ರೂಮ್ ನೀಡಿದ್ದ ನಯನಾ ಬಳಿಕ ರೂಮ್ ಗೆ ರಹಸ್ಯ ಕ್ಯಾಮರಾ ಅಳವಡಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ರೆಕಾರ್ಡ್ ಮಾಡಿದ್ದ ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಪಾರ್ಟನರ್ ಕಿರಣ್ ಜೊತೆಸೇರಿ ಪ್ರೇಮಿಗಳಿಗೆ ಬ್ಲ್ಯಾಕ್ ಮೇಲ್ ಮಾಡಿ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಹಣ ನೀಡದಿದ್ದರೆ ವಿಡಿಯೋವನ್ನು ವೈರಲ್ ಮಾಡುವುದಾಗಿ ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ ಕಿರಣ್ ಬೆದರಿಕೆ ಹಾಕಿದ್ದ. ನಯನಾ ತನ್ನ ಸಂಬಂಧಿಕ ಯುವತಿಗೆ ರೂಮ್ ನೀಡಿ ಈ ರೀತಿ ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆ ಹಾಕುತ್ತಿದ್ದಳು ಎಂಬ ಸಂಗತಿ ಬಯಲಾಗಿದೆ.

ಬ್ಲ್ಯಾಕ್ ಮೇಲ್ ಗೆ ಬೇಸತ್ತ ಯುವತಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೆಟ್ಟಿ ಲಂಚ್ ಹೋಮ್ ಒಡತಿ ನಯನಾ ಹಾಗೂ ಕಿರಣ್ ನನ್ನು ಬಂಧಿಸಿದ್ದಾರೆ. ಅಲ್ಲದೇ ಅವರ ಮೊಬೈಲ್ ನಲ್ಲಿದ್ದ ಯುವತಿಯ ವಿಡಿಯೋವನ್ನು ಡಿಲಿಟ್ ಮಾಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular