HomeKarnatakaಆಷಾಢ ಮಾಸಕ್ಕೆ ತವರಿಗೆ ಬಂದು ಪ್ರಿಯಕರನ ಭೇಟಿಯಾದ ನವ ವಿವಾಹಿತೆ ದುಡುಕಿನ ನಿರ್ಧಾರ: ಕೃಷಿ ಹೊಂಡಕ್ಕೆ...

ಆಷಾಢ ಮಾಸಕ್ಕೆ ತವರಿಗೆ ಬಂದು ಪ್ರಿಯಕರನ ಭೇಟಿಯಾದ ನವ ವಿವಾಹಿತೆ ದುಡುಕಿನ ನಿರ್ಧಾರ: ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಗಳ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಎಂ. ಮುದ್ದಲಹಳ್ಳಿಯಲ್ಲಿ ನಡೆದಿದೆ.

ವೇಣು(21), ಅನುಷಾ(19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎನ್ನಲಾಗಿದೆ. ಎಂ. ಮುದ್ದಲಹಳ್ಳಿ ಗ್ರಾಮದ ವೇಣು ಮತ್ತು ಕಾಚಹಳ್ಳಿ ನಿವಾಸಿ ಅನುಷಾ ಪ್ರೀತಿಸಿದ್ದರು. ಜಾತಿಯ ನೆಪವೊಡ್ಡಿ ಅನುಷಾ ಪೋಷಕರು ಮದುವೆಗೆ ನಿರಾಕರಿಸಿದ್ದರು. ಒಂದು ತಿಂಗಳ ಬೇರೆ ವ್ಯಕ್ತಿಯ ಜೊತೆ ಅನುಷಾಗೆ ಮದುವೆಯಾಗಿತ್ತು. ಆಷಾಢ ಮಾಸಕ್ಕೆ ತವರು ಮನೆಗೆ ಬಂದಿದ್ದ ಅನುಷಾ ಎಂ. ಮುದ್ದಲಹಳ್ಳಿಗೆ ಬಂದು ಪ್ರಿಯಕರ ವೇಣು ಭೇಟಿಯಾಗಿದ್ದಾರೆ.

ಮುದ್ದಲಹಳ್ಳಿ ಬಳಿಯ ಕೃಷಿಯ ಹೊಂಡಕ್ಕೆ ಹಾರಿ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular