HomeKarnatakaಪ್ರಿಯತಮೆಯ ಖಾಸಗಿ ಫೋಟೋ ವೈರಲ್ ಮಾಡಿ ಪೊಲೀಸರಿಗೆ ದೂರು ನೀಡಿದ ಯುವಕ; ಕಂಪ್ಲೇಂಟ್ ಕೊಟ್ಟವನೇ ಅರೆಸ್ಟ್

ಪ್ರಿಯತಮೆಯ ಖಾಸಗಿ ಫೋಟೋ ವೈರಲ್ ಮಾಡಿ ಪೊಲೀಸರಿಗೆ ದೂರು ನೀಡಿದ ಯುವಕ; ಕಂಪ್ಲೇಂಟ್ ಕೊಟ್ಟವನೇ ಅರೆಸ್ಟ್

ಬೆಂಗಳೂರು: ಪ್ರಿಯತಮೆಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದ ಯುವಕ, ಪ್ರಿಯತಮೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ ವ್ಯಕ್ತಿಯೇ ಅರೆಸ್ಟ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತಮಿಳುನಾಡು ಮೂಲದ ಅಂಜಯ್ (26) ಬಂಧಿತ ಆರೋಪಿ. ಕಾಮುಕ ಯುವಕನನ್ನು ಆಗ್ನೇಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂಧಿತ ಆರೋಪಿ ಹಾಗೂ ಆತನ ಸ್ನೇಹಿತರು ಟೆಲಿಗ್ರಾಮ್ ನಲ್ಲಿ ತಮ್ಮದೇ ಗ್ರೂಪ್ ಮಾಡಿಕೊಂಡು ಪ್ರಿಯತಮೆ, ಸ್ನೇಹಿತೆಯರ ನಗ್ನ ಫೋಟೋಗಳನ್ನು ಅಪ್ ಲೋಡ್ ಮಾಡಿ, ಅದಕ್ಕೆ ಬರುವ ಕಮೆಂಟ್ ಗಳನ್ನು ನೋಡಿ ಖುಷಿ ಪಡುತ್ತಿದ್ದರಂತೆ. ಅಲ್ಲದೇ ಇನ್ ಸ್ಟಾಗ್ರಾಂ ಖಾತೆ ತೆಗೆದು ಅದರಲ್ಲೂ ಅಪ್ ಲೋಡ್ ಮಾಡಿದ್ದರಂತೆ

ಆರೋಪಿ ಅಂಜಯ್ ಸ್ವತಃ ತನ್ನ ಪ್ರಿಯತಮೆಯ ಖಾಸಗಿ ಫೋಟೋಗಳನ್ನೇ ಅಪ್ ಲೋಡ್ ಮಾಡಿದ್ದ. ಅಂಜಯ್ ನನ್ನು ವಿವಾಹವಾಗಲು ಮುಂದಾಗಿದ್ದ ಯುವತಿಗೆ ತನ್ನ ಖಾಸಗಿ ಫೋಟೋಗಳು ವೈರಲ್ ಆಗಿರುವುದು ಕಂಡು ಶಾಕ್ ಆಗಿದೆ. ಅಂಜಯ್ ತನಗೇನೂ ಗೊತ್ತೇ ಇಲ್ಲ ಎಂಬಂತೆ ಪ್ರಿಯತಮೆಯೊಂದಿಗೆ ಸಿಇಎನ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ಆರೋಪಿ ವೈರಲ್ ಆಗಿದ್ದ ಫೋಟೋ ಡಿಲಿಟ್ ಮಾಡುವಂತೆ ಮನವಿ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಅಂಜಯ್ ವಿಕೃತಿ ಬಯಲಾಗಿದೆ.

ಆರೋಪಿ ಅಂಜಯ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸ್ನೇಹಿತರೊಂದಿಗೆ ಸೇರಿ ಪ್ರಿಯತಮೆ ಹಾಗೂ ಸ್ನೇಹಿತೆಯರ ಖಾಸಗಿ ಫೋಟೊ ಅಪ್ ಲೋಡ್ ಮಾಡಿ ವಿಕೃತಿ ಮೆರೆಯುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular