HomeKarnatakaಪ್ರೀತಿಸಿದ ಯುವತಿಗೆ ಪ್ರೇಮಿಯಿಂದಲೇ ಚಾಕು ಇರಿತ; ಯುವತಿ ಸ್ಥಿತಿ ಗಂಭೀರ

ಪ್ರೀತಿಸಿದ ಯುವತಿಗೆ ಪ್ರೇಮಿಯಿಂದಲೇ ಚಾಕು ಇರಿತ; ಯುವತಿ ಸ್ಥಿತಿ ಗಂಭೀರ

ಹಾವೇರಿ: ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಯುವತಿಗೆ ಚಾಕು ಇರಿದಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.

20 ವರ್ಷದ ಯುವತಿ ಲಕ್ಷ್ಮಿ ಚಾಕು ಇರಿತಕ್ಕೆ ಒಳಗಾದವಳು. ಮಹೇಶ್ ಯುವತಿಗೆ ಚಾಕು ಇರಿದ ಆರೋಪಿ. ಎರಡು ವರ್ಷಗಳಿಂದ ಮಹೇಶ್ ಹಾಗೂ ಲಕ್ಷ್ಮೀ ಪ್ರೀತಿಸುತ್ತಿದ್ದರು, ಲಕ್ಷ್ಮಿ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಳು.

ಲಕ್ಷ್ಮಿ ಬೇರೆ ಯುವಕನ ಜೊತೆ ಸ್ನೇಹ ಬೆಳೆಸಿದ್ದಾಳೆ ಎಂಬ ಅನುಮಾನದಿಂದ ಮಹೇಶ್ ಆಕೆಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಯುವತಿಯ ಕೈ, ಎದೆಯ ಭಾಗದಲ್ಲಿ ಗಂಭೀರವಾದ ಗಾಯಗಳಾಗಿವೆ. ಗಾಯಾಳುವನ್ನು ಶಿಗ್ಗಾಂವಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular