ಬೆಂಗಳೂರು: ಬೆಂಗಳೂರಿನಲ್ಲಿ ಲವ್ ಜಿಹಾದ್ ಪ್ರಕರಣ ನಡೆದಿದೆ. ಹಿಂದೂ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿರುವ ಮುಸ್ಲಿಂ ಯುವಕನೊಬ್ಬ ಬ್ಲ್ಯಾಕ್ ಮೇಲ್ ಮಾಡಿ ಹಣ ದೋಚಿ ವಂಚಿಸಿರುವ ಘಟನೆ ನಡೆದಿದೆ.
ಸಾಲದ್ದಕ್ಕೆ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಮತಾಂತರಕ್ಕೆ ಒತ್ತಡ ಹಾಕಿದ್ದಾನೆ. ಈ ಬಗ್ಗೆ ಯುವತಿ ಹಲವು ತಿಂಗಳ ಹಿಂದೆಯೇ ದೂರು ನೀಡಿದ್ದರೂ ಪೊಲೀಸರು ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಉಸ್ಮಾನ್ ಎಂಬಾತ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣ ದೋಚಿದ್ದಾನೆ. ಕಳೆದ ಮಾರ್ಚ್ ನಲ್ಲಿಯೇ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಈವರೆಗೂ ಆರೋಪಿ ವಿರುದ್ಧ ಕ್ರಮವಾಗಿಲ್ಲ ಎನ್ನಲಾಗಿದೆ.
ಸ್ನೇಹಿತರಿಂದ ಪರಿಚಯನಾದ ಉಸ್ಮಾನ್, ಯುವತಿಯನ್ನು ಪ್ರೀತಿಸಿ ಆಕೆಯೊಂದಿಗೆ ಒಂದೂವರೆ ವರ್ಷ ಲಿವ್-ಇನ್ ರಿಲೇಷನ್ ಶಿಪ್ ನಲ್ಲಿದ್ದ. ಖಾಸಗಿ ಫೋಟೋಗಳನ್ನು ಸಂಗ್ರಹಿಸಿ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದ. ಆತನಿಂದ ದೂರಾಗಲು ಯುವತಿ ಯತ್ನಿಸುತ್ತಿದ್ದಂತೆ ಪೋಷಕರಿಗೆ ಫೋಟೋ ಕಳಿಸುವುದಾಗಿ ಬೆದರಿಕೆ ಹಾಕಿದ್ದನಂತೆ ಯುವತಿಯುಂದ ಹಂತ ಹಂತವಾಗಿ 12.2 ಲಕ್ಷ ಹಣ ದೋಚಿದ್ದಲ್ಲದೇ 14.5 ಗ್ರಾಂ ಚಿನ್ನಾಭರಣವನ್ನೂ ಪಡೆದಿದ್ದಾನೆ.
ಅಲ್ಲದೇ ಇಸ್ಲಾಂ ಗೆ ಮತಾಂತರವಾಗಬೇಕು. ತನ್ನನ್ನು ಮದುವೆಯಾಗಿ ಮತಾಮ್ತರವಾಗದಿದ್ದರೆ ದೆಹಲಿ ಕೇಸ್ ನಂತೆ ನಿನ್ನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಹೆದರಿಸಿದ್ದಾನೆ. ಈ ಬಗ್ಗೆ ಯುವತಿ ಪೊಲೀಸರಿಗೆ ಯುವತಿ ದೂರು ನೀಡಿದ್ದಾಳೆ. ಆದರೆ ಈವರೆಗೆ ಆರೋಪಿ ವಿರುದ್ಧ ಕ್ರಮವಾಗಿಲ್ಲ ಎಂದು ಯುವತಿ ದೂರಿದ್ದಾಳೆ.
