HomeIndia70 ವರ್ಷದ ವೃದ್ಧನ ಜೊತೆ 25 ವರ್ಷದ ಯುವತಿ ಮದುವೆ....! ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅಂದ್ರು...

70 ವರ್ಷದ ವೃದ್ಧನ ಜೊತೆ 25 ವರ್ಷದ ಯುವತಿ ಮದುವೆ….! ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅಂದ್ರು ನೆಟ್ಟಿಗರು

ಪ್ರೀತಿ ಮಾಡುವುದಕ್ಕೆ ಜಾತಿ, ಮತ, ಭೇದ, ಅಂತಸ್ತು ಲೆಕ್ಕಕ್ಕೆ ಬರುವುದಿಲ್ಲ ಎಂಬ ಮಾತಿದೆ. ಇದಕ್ಕೆ ಮತ್ತೊಂದು ಕೊಂಡಿ ಎಂಬಂತೆ ಪ್ರೀತಿಗೆ ವಯಸ್ಸಿನ ಹಂಗೂ ಇಲ್ಲ ಎಂದು ಹೇಳಬಹುದಾಗಿದೆ. ಬಿಹಾರದಲ್ಲಿ ನಡೆದಿರುವ ಮದುವೆಯೊಂದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಹೌದು, ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದ್ದು 70 ವರ್ಷದ ಮೊಹಮದ್ ಖಲೀಮುಲ್ಲಾ ನೂರಾನಿ 25 ವರ್ಷದ ರೇಷ್ಮಾ ಪರ್ವೀನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಸಂಪ್ರದಾಯ ರೀತ್ಯಾ ನಡೆದ ಈ ಮದುವೆಗೆ ವಧು, ವರನ ಕುಟುಂಬಸ್ಥರು, ಗ್ರಾಮಸ್ಥರು ಮಾತ್ರವಲ್ಲದೆ ಸ್ಥಳೀಯ ಪತ್ರಕರ್ತರೂ ಸಹ ಸಾಕ್ಷಿಯಾಗಿದ್ದರು.

ಬೈದಾ ಗ್ರಾಮದ ಮೊಹಮ್ಮದ್ ಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ ಮೃತಪಟ್ಟಿದ್ದರು. ಹೀಗಾಗಿ ಈತ ಹಂಮ್ಜಾಪುರದ ಇಸ್ಲಾಂ ನಗರ ವಾಸಿ ರೇಷ್ಮಾ ಪರ್ವೀನ್ ಅವರನ್ನು ವಿವಾಹವಾಗಿದ್ದಾರೆ. ಎರಡು ಕುಟುಂಬ ಸದಸ್ಯರು ಈ ಮದುವೆಗೆ ಒಪ್ಪಿಗೆ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular