HomeKarnatakaರಾಡ್ ನಿಂದ ಹೊಡೆದು ಬೋರ್ ವೆಲ್ ಲಾರಿ ಚಾಲಕನ ಹತ್ಯೆ: ಐವರು ಆರೋಪಿಗಳು ಅರೆಸ್ಟ್

ರಾಡ್ ನಿಂದ ಹೊಡೆದು ಬೋರ್ ವೆಲ್ ಲಾರಿ ಚಾಲಕನ ಹತ್ಯೆ: ಐವರು ಆರೋಪಿಗಳು ಅರೆಸ್ಟ್

ಬೆಂಗಳೂರು: ರಾಡ್ ನಿಂದ ಹೊಡೆದು ಬೋರ್ ವೆಲ್ ಲಾರಿ ಚಾಲಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆಗಸ್ಟ್ 11ರಂದು ರಾತ್ರಿ ಲಾರಿ ಚಾಲಕ ಸುರೇಶ್ ನನ್ನು ಕೊಲೆಗೈದು ಪರಾರಿಯಾಗಿದ್ದರು. ಇದೀಗ ಐವರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.

ದಿನೇಶ್, ಅಲ್ಕೇಶ್ ಪಾನ್ಸೆ, ಸಂಜಯ್, ಸಹದೇವ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಚಾಲಕ ಸೇರಿ ಎಲ್ಲರೂ ಬೋರ್ ವೆಲ್ ಲಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಚು ರೂಪಿಸಿ ಸುರೇಶ್ ನನ್ನು ಕೊಲೆಗೈದು ಪರಾರಿಯಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಡುಗೆ ಸರಿಯಾಗಿ ಮಾಡಿಲ್ಲ ಎಂಬ ವಿಚಾರವಾಗಿ ಕಾರ್ಮಿಕ ಸಹದೇವ್ ಜೊತೆ ಸುರೇಶ್ ಗಲಾಟೆ ಮಾಡಿದ್ದ. ಇಬ್ಬರ ನಡುವೆ ಗಲಾಟೆ ಜೋರಾಗಿತ್ತು. ಜೊತೆಯಲ್ಲಿದ್ದವರು ಇಬ್ಬರ ಗಲಾಟೆ ಬಿಡಿಸಿ ಸಮಾಧಾನ ಮಾಡಿದ್ದರು. ಆದರೆ ತಡರಾತ್ರಿ 11:30ರ ಸುಮಾರಿಗೆ ಕಲ್ಲು ಹಾಗೂ ರಾಡ್ ನಿಂದ ಹೊಡೆದು ಸುರೇಶ್ ನನ್ನು ಕೊಲೆಗೈದು ಎಸ್ಕೇಪ್ ಆಗಿದ್ದರು. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕೊಲೆ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular