ಶಾರುಖ್‌ ಖಾನ್‌ ಹೌದೋ, ಅಲ್ವೊ ? ವಿಡಿಯೋ ನೋಡಿ ತಲೆ ಕೆಡಿಸಿಕೊಂಡ ನೆಟ್ಟಿಗರು

ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾಣ್‌ ಈಗಾಗಲೇ ದೇಶಾದ್ಯಂತ ಹೆಚ್ಚು ಗಮನ ಸೆಳೆದಿದೆ. ಚಿತ್ರದ ಬೇಷರಂ ರಂಗ್‌ ಹಾಡು ಭಾರಿ ಕೋಲಾಹಲ ಸೃಷ್ಟಿಸಿದೆ. ಆದರೆ ಈಗ ಯುವಕನೊಬ್ಬ ಈ ಚಿತ್ರದ ಝೂಮೇ ಲೋ ಪಠಾಣ್‌ ನೃತ್ಯ ಮಾಡಿದದು ಅದೀಗ ಭಾರಿ ವೈರಲ್‌ ಆಗಿದೆ.

ಈ ನೃತ್ಯ ಇಷ್ಟೆಲ್ಲಾ ವೈರಲ್‌ ಆಗಲು ಕಾರಣ ಏನೆಂದರೆ, ಈ ಯುವಕ ಥೇಟ್‌ ಶಾರುಖ್‌ ಖಾನ್‌ರನ್ನು ಹೋಲುತ್ತಿದ್ದಾನೆ. ಇಬ್ರಾಹಿಂ ಖಾದ್ರಿ ಎಂಬ ಯುವಕ ಈ ಹಾಡಿಗೆ ಸ್ಟೆಪ್‌ ಹಾಕಿದ್ದಾನೆ.

ಇಬ್ರಾಹಿಂ ಖಾದ್ರಿ ಅವರು ಸನ್‌ಗ್ಲಾಸ್‌ನೊಂದಿಗೆ ಶಾರುಖ್‌ ಅವರನ್ನು ಹೋಲುವಂತೆ ವೇಷ ತೊಟ್ಟು ನೃತ್ಯ ಮಾಡಿದ್ದಾನೆ. ಇದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ವಿಡಿಯೋ 8 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.

ನೆಟ್ಟಿಗರು ಸಂಪೂರ್ಣವಾಗಿ ಆಶ್ಚರ್ಯಚಕಿತರಾಗಿದ್ದಾರೆ. ಈತ ಶಾರುಖ್‌ ಹೌದೋ, ಅಲ್ಲವೋ ಎಂದೂ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read