HomeEntertainmentಲಂಡನ್ ಬೀದಿಗಳಲ್ಲಿ ವಿರಾಟ್-ಅನುಷ್ಕಾ ಪ್ರತ್ಯಕ್ಷ: ವೈರಲ್ ಆಯ್ತು ಕ್ಯೂಟ್ ಜೋಡಿಯ ಸೈಲೆಂಟ್ ವಾಕಿಂಗ್ ಫೋಟೋಸ್!

ಲಂಡನ್ ಬೀದಿಗಳಲ್ಲಿ ವಿರಾಟ್-ಅನುಷ್ಕಾ ಪ್ರತ್ಯಕ್ಷ: ವೈರಲ್ ಆಯ್ತು ಕ್ಯೂಟ್ ಜೋಡಿಯ ಸೈಲೆಂಟ್ ವಾಕಿಂಗ್ ಫೋಟೋಸ್!

ಟೀಮ್ ಇಂಡಿಯಾ ತಾರೆ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಮತ್ತೆ ಸುದ್ದಿ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚೆಗೆ ಲಂಡನ್ ಬೀದಿಗಳಲ್ಲಿ ಈ ತಾರಾ ಜೋಡಿ ತೀರ ಸರಳವಾಗಿ ಓಡಾಡುತ್ತಿರುವ ಫೋಟೋಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಮಂಗಳವಾರ ಬೆಳಿಗ್ಗೆ ಲಂಡನ್‌ನ ರಸ್ತೆಯೊಂದರಲ್ಲಿ ವಿರಾಟ್ ಮತ್ತು ಅನುಷ್ಕಾ ವಾಕಿಂಗ್ ಮಾಡುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ವಿರಾಟ್ ಕೊಹ್ಲಿ ಗ್ರೀನ್ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರೆ, ಅನುಷ್ಕಾ ಶರ್ಮಾ ಗ್ರೆ ಲೆಗ್ಗಿಂಗ್ಸ್, ವೈಟ್ ಟೀ ಶರ್ಟ್ ಹಾಗೂ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ತಮ್ಮ ಮಗ ಅಕಾಯ್‌ನ ಮಗುವಿನ ತಳ್ಳುವ ಗಾಡಿಯನ್ನು ಹಿಡಿದುಕೊಂಡು ಸಾಗುತ್ತಿದ್ದ ಈ ಜೋಡಿ, ಹಾದಿಯಲ್ಲಿ ಪರಿಚಿತ ಮಹಿಳೆಯೊಬ್ಬರ ಜೊತೆ ನಗುತ್ತಾ ಮಾತನಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವರದಿಗಳ ಪ್ರಕಾರ ಇವರು ತಮ್ಮ ಮಗನ ಪ್ಲೇಸ್ಕೂಲ್ ಮುಂಭಾಗದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರನ್ನು ಮಾಧ್ಯಮ ಹಾಗೂ ಸಾರ್ವಜನಿಕರ ಬೆಳಕಿನಿಂದ ದೂರವಿಡಲು ಈ ದಂಪತಿ ಮೊದಲಿನಿಂದಲೂ ಬಯಸಿದ್ದಾರೆ. ಭಾರತದಲ್ಲಿ ಸಿಗುವ ತೀವ್ರ ಸಾರ್ವಜನಿಕ ಗಮನ ಮತ್ತು ಖಾಸಗಿತನದ ಕೊರತೆಯಿಂದಾಗಿ, ಮಕ್ಕಳಿಗೆ ಸಾಮಾನ್ಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ಇಬ್ಬರೂ ಲಂಡನ್‌ನಲ್ಲಿ ನೆಲೆಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ಅನುಷ್ಕಾ ಶರ್ಮಾ ಅಭಿನಯದ ಮಾಜಿ ಕ್ರಿಕೆಟರ್ ಜುಲನ್ ಗೋಸ್ವಾಮಿ ಬಯೋಪಿಕ್ ಚಕ್ದಾ ಎಕ್ಸ್‌ಪ್ರೆಸ್ ಚಿತ್ರೀಕರಣ ಮುಗಿದಿದ್ದರೂ ಇನ್ನು ಬಿಡುಗಡೆ ಭಾಗ್ಯ ಕಂಡಿಲ್ಲ. 2018ರ ಜೀರೋ ಚಿತ್ರದ ನಂತರ ಅನುಷ್ಕಾ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿಲ್ಲವಾದರೂ, ಅವರ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular