ಬೆಂಗಳೂರು : 3 ಲಕ್ಷ ಲಂಚಕ್ಕೆ ಕೈಯೊಡ್ಡಿದ್ದ ಚಿಕ್ಕಜಾಲ ಪಿಎಸ್ ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಂಚನೆ ಕೇಸ್ ನಲ್ಲಿ ವ್ಯಕ್ತಿಯೊಬ್ಬರಿಂದ ಚಿಕ್ಕಜಾಲ ಪಿಎಸ್ ಐ ಶಿವಣ್ಣ 3 ಲಕ್ಷ ಲಂಚಕ್ಕೆ ಬೇಡಿಕೆಯೊಡ್ಡಿದ್ದರು ಎನ್ನಲಾಗಿದೆ .
ಈ ಹಿನ್ನೆಲೆ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲಂಚ ಸ್ವೀಕಾರದ ವೇಳೆ ಪಿಎಸ್ ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

