HomeKarnatakaಹೋಟೆಲ್ ನಲ್ಲಿ ವಡೆಯಲ್ಲಿ ಹಲ್ಲಿ ಪತ್ತೆ: ಅರ್ಧ ತಿಂದ ಬಳಿಕ ಶಾಕ್ ಆದ ಪ್ರವಾಸಿಗ

ಹೋಟೆಲ್ ನಲ್ಲಿ ವಡೆಯಲ್ಲಿ ಹಲ್ಲಿ ಪತ್ತೆ: ಅರ್ಧ ತಿಂದ ಬಳಿಕ ಶಾಕ್ ಆದ ಪ್ರವಾಸಿಗ

ಚಿಕ್ಕಮಗಳೂರು: ಹೋಟೆಲ್‌ ಒಂದರಲ್ಲಿ ಪ್ರವಾಸಿಗರೊಬ್ಬರಿಗೆ ಉದ್ದಿನ ವಡೆಯಲ್ಲಿ ಹಲ್ಲೆ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮದ ಹೋಟೆಲ್ ನಲ್ಲಿ ನಡೆದಿದೆ.

ಹಲ್ಲಿ ವಡೆಯಲ್ಲಿ ಮಿಕ್ಸ್‌ ಆಗಿ ಎಣ್ಣೆಯಲ್ಲಿ ಬೆಂದಿದ್ದರಿಂದ ಮೊದಲಿಗೆ ಪ್ರವಾಸಿಗನಿಗೆ ಅದು ಹಲ್ಲಿ ಎಂದು ಗೊತ್ತಾಗಿಲ್ಲ. ಅರ್ಧ ವಡೆ ತಿಂದ ಬಳಿಕ ಸತ್ತ ಹಲ್ಲಿ ಇರುವುದು ಗೊತ್ತಾಗಿದೆ. ಪ್ರವಾಸಿಗನ ಫಜೀತಿ ಹೇಳಲಾಗದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನಿಂದ ಹೊರನಾಡಿಗೆ ಬಂದಿದ್ದ ಆರು ಜನರ ಪ್ರವಾಸಿಗರ ತಂಡ ಖಾಸಗಿ ಹೋಟೆಲ್‌ನಲ್ಲಿ ತಿಂಡಿ ತಿನ್ನಲು ಹೋಗಿದ್ದರು. ತಿಂಡಿ ತಿನ್ನುವಾಗ ಉದ್ದಿನ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಪ್ರವಾಸಿಗ ಅಭಿಷೇಕ್ ಹೋಟೆಲ್ ಮಾಲೀಕರಿಗೆ ಹಲ್ಲಿಯನ್ನು ತೋರಿಸಿದಾಗ ಮಾಲೀಕರು ಜಗಳಕ್ಕೆ ಬಂದು ಹಣ ಕೊಡಬೇಡಿ ಹೋಗಿ ಎಂದಿದ್ದಾರೆ.

ಪ್ರವಾಸಕ್ಕೆ ಬಂದಿದ್ದ ಮಕ್ಕಳು ಕೂಡ ವಡೆಯನ್ನ ತಿಂದಿದ್ದಾರೆ. ಏನಾದರೂ ಹೆಚ್ಚು-ಕಡಿಮೆ ಆದರೆ ಎಂದು ಆಸ್ಪತ್ರೆಗೆ ತೋರಿಸುವಂತೆ ಅಭಿಷೇಕ್‌ ಆಗ್ರಹಿಸಿದ್ದಾರೆ. ಆದರೆ, ಹೊಟೇಲ್ ಮಾಲೀಕ ಆಸ್ಪತ್ರೆಗೆ ತೋರಿಸಲು ನಿರಾಕರಿಸಿದ್ದಾರೆ. ಕೂಡಲೇ ಪ್ರವಾಸಿಗರು 112ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೊದಲು ಆಸ್ಪತ್ರೆಗೆ ತೋರಿಸಿ ಆಮೇಲೆ ಮಾತನಾಡೋಣ ಎಂದು ಮಕ್ಕಳು ಸೇರಿದಂತೆ ಆರು ಜನ ಪ್ರವಾಸಿಗರನ್ನು ಕಳಸ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದ್ದಾರೆ.

ಸದ್ಯ ಯಾರಿಗೂ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಿಲ್ಲ. ಬಳಿಕ ಪ್ರವಾಸಿಗರು ಬೆಂಗಳೂರಿಗೆ ಹಿಂದಿರುಗಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular