
ಮೀನು ಹಿಡಿಯಲು ಹೋಗಿದ್ದ ಯುವಕನ ಗಂಟಲಲ್ಲಿ ಜೀವಂತ ಮೀನು ಸಿಲುಕಿ ಯುವಕ ಸಾವನ್ನಪ್ಪಿರುವ ವಿಚಿತ್ರ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಆಲಪ್ಪುಝ ಬಳಿಯ ಕಾಯಂಕುಳಂ ಬಳಿ ಈ ದುರಂತ ಸಂಭವಿಸಿದೆ. ಆದರ್ಶ್ ಅಲಿಯಾಸ್ ಉನ್ನಿ (25) ಮೃತ ಯುವಕ. ಆದರ್ಶ್ ತನ್ನ ಸ್ನೇಹಿತರೊಂದಿಗೆ ಜಮೀನಿನ ಬಳಿಯ ಗದ್ದೆಯಲ್ಲಿ ಮೀನು ಹಿಡಿಯಲೆಂದು ಹೋಗಿದ್ದ. ಮೀನು ಹಿಡಿಯುತ್ತಿದ್ದ ವೇಳೆ ಮೀನೊಂದು ಆತನ ಬಾಯಿಗೆ ಕಚ್ಚಿಕೊಂಡು ಗಂಟಲೊಳಗೆ ಸಿಲುಕಿಕೊಂಡಿದೆ. ತಕ್ಷಣ ಆತನ ಸ್ನೇಹಿತರು ಯುವಕನನ್ನು ಓಚಿರ ಬಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದಾಗ್ಯೂ ಯುವಕನ ಪ್ರಾಣ ರಕ್ಷಿಸಲು ಸಾಧ್ಯವಾಗಿಲ್ಲ. ಯುವಕ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಕಾಯಂಕುಳಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.