ಮಹಿಳಾ ಟಿ ಟ್ವೆಂಟಿ ಏಷ್ಯಾ ಕಪ್ ಪಂದ್ಯಗಳು ಇದೆ ಜುಲೈ 19 ರಿಂದ ಆರಂಭವಾಗಲಿದ್ದು, ಮನರಂಜನೆಯ ರಸ ದೌತಣ ಪಡೆಯಲು ಕ್ರಿಕೆಟ್ ಪ್ರೇಮಿಗಳು ಸಜ್ಜಾಗಿದ್ದಾರೆ. ಶ್ರೀಲಂಕಾದಲ್ಲಿ ಮಹಿಳಾ ಏಷ್ಯಾ ಕಪ್ ನಡೆಯುತ್ತಿದ್ದು, ಜುಲೈ 19 ರಿಂದ ಜುಲೈ 24ರ ವರೆಗೆ ಲೀಗ್ ಹಂತದ ಪಂದ್ಯಗಳಿರಲಿವೆ. ಜುಲೈ 26ಕ್ಕೆ ಸೆಮಿ ಫೈನಲ್ ಹಾಗೂ ಜುಲೈ 28ರಂದು ಫೈನಲ್ ಪಂದ್ಯ ನಡೆಯುತ್ತದೆ.
ಭಾರತ ಸೇರಿದಂತೆ ಒಟ್ಟಾರೆ 8 ತಂಡಗಳು ಏಷ್ಯಾ ಕಪ್ ನಲ್ಲಿ ಸೆಣಸಾಡುತ್ತಿದ್ದು, Uae, ಭಾರತ, ನೇಪಾಳ ಹಾಗೂ ಪಾಕಿಸ್ತಾನ ಗ್ರೂಪ್ ಏ ತಂಡಗಳಾದರೆ, ಶ್ರೀಲಂಕಾ, ಮಲೇಶಿಯಾ, ಥಾಯ್ಲ್ಯಾಂಡ್ ಹಾಗೂ ಬಾಂಗ್ಲಾದೇಶ ಗ್ರೂಪ್ ಬಿ ತಂಡಗಳಾಗಿವೆ. ಜುಲೈ 19ರ ಮೊದಲ ದಿನ uae ಮತ್ತು ನೇಪಾಳ ಮುಖಮುಖಿಯಾದರೆ ಮತ್ತೊಂದು ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಕಾದಾಟ ನಡೆಸಲಿವೆ. ಒಟ್ಟಾರೆ ಬಹುತೇಕ ಪಂದ್ಯಗಳು ಶ್ರೀಲಂಕಾದ ದಾಂಬೂಲ್ಲದಲ್ಲಿ ನಡೆಯಲಿವೆ.