HomeKarnatakaಜಗತ್ತಿನಲ್ಲಿ ರೋಗ ಹೆಚ್ಚಳ, ಭವಿಷ್ಯದಲ್ಲಿ ಕೆಟ್ಟ ದಿನಗಳೇ ಜಾಸ್ತಿ: ಕೋಡಿಮಠ ಸ್ವಾಮೀಜಿ ಶಾಕಿಂಗ್ ಭವಿಷ್ಯ

ಜಗತ್ತಿನಲ್ಲಿ ರೋಗ ಹೆಚ್ಚಳ, ಭವಿಷ್ಯದಲ್ಲಿ ಕೆಟ್ಟ ದಿನಗಳೇ ಜಾಸ್ತಿ: ಕೋಡಿಮಠ ಸ್ವಾಮೀಜಿ ಶಾಕಿಂಗ್ ಭವಿಷ್ಯ

ಬೆಳಗಾವಿ: ಜಗತ್ತಿನಲ್ಲಿ ರೋಗಗಳು ಹೆಚ್ಚಾಗುತ್ತವೆ. ಭವಿಷ್ಯದಲ್ಲಿ ಕೆಟ್ಟ ದಿನಗಳು ಜಾಸ್ತಿಯಾಗುತ್ತವೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯ ರಾಮತೀರ್ಥನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಜಗತ್ತಿನಲ್ಲಿ ರೋಗ ಹೆಚ್ಚಾಗಲಿದ್ದು, ಜನರು ಆಯಸ್ಸು, ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳು ಶುಭವಿಲ್ಲ, ಒಳ್ಳೆಯ ದಿನಗಳು ಇವೆ. ಆದರೆ, ಕೆಟ್ಟ ದಿನಗಳು ಜಾಸ್ತಿ ಎಂದು ಹೇಳಿದ್ದಾರೆ.

ಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಇವೆ. ವಿಶೇಷವಾಗಿ ಕಪ್ಪು ಬೆಳಕಿನಲ್ಲಿ ಕಪ್ಪು ಹೆಚ್ಚಾಗಿದೆ ಎಂದ ಅವರು, ರಾಜ್ಯದಲ್ಲಿ ಭೀಕರ ಮಳೆಯಾಗುತ್ತದೆ. ಗುಡ್ಡ ಕುಸಿತವಾಗುತ್ತದೆ, ಸಾವು ನೋವು ಸಂಭವಿಸುತ್ತದೆ ಎಂದು ಈ ಹಿಂದೆ ಹೇಳಿದ್ದೆ. ಇದು ಅಮಾವಾಸ್ಯೆಯವರೆಗೂ ಇರುತ್ತದೆ. ಪ್ರಕೃತಿಯಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇದೆ. ಅದು ಪ್ರಕೃತಿಯ ದೋಷ. ಆದರೆ ಈಗ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗುತ್ತದೆ. ಅನಿಷ್ಟ ಜಾಸ್ತಿ ಇರುತ್ತದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular