ನವದೆಹಲಿ: ನಿಸ್ಸಂದೇಹವಾಗಿ, COVID-19 ಸಾಂಕ್ರಾಮಿಕವು ಜನರು ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಮೇಲೆ ಭಾರಿ ಪರಿಣಾಮ ಬೀರಿದೆ. ಉದ್ಯೋಗಿಗಳು ಪ್ರತಿದಿನ ಒಂಬತ್ತರಿಂದ ಐದರವರೆಗೆ ಕಚೇರಿಯಲ್ಲಿರಬೇಕು ಎಂಬ ಸಾಂಪ್ರದಾಯಿಕ ಕಲ್ಪನೆಯು ಬದಲಾಗಿದೆ ಮತ್ತು ವಾರದಲ್ಲಿ ಐದು ದಿನ ಕೆಲಸ ಮಾಡಬೇಕು, ಇದೇ ಸಮಯಕ್ಕೆ ಹೊಂದಿಕೊಳ್ಳಬೇಕು ಇತ್ಯಾದಿ ಕೆಲ ಕೆಲಸದ ಪ್ರವೃತ್ತಿಗಳಲ್ಲಿ ವ್ಯತ್ಯಾಸಗಳಾಗುತ್ತಿವೆ.
ಉದ್ಯೋಗಿಗಳ ಜೊತೆ ಕಂಪೆನಿಗಳೂ ಈ ವ್ಯತ್ಯಾಸಕ್ಕೆ ಹೊಂದಿಕೊಂಡಿದ್ದು, ವಿಶ್ವಾದ್ಯಂತ ಹಲವಾರು ಕಂಪನಿಗಳು ಈ ಬದಲಾವಣೆಗಳನ್ನು ಅಳವಡಿಸಿಕೊಂಡಿವೆ. ಇದು ಉದ್ಯೋಗಿಗಳಿಂದ ಶ್ಲಾಘಿಸಲ್ಪಟ್ಟಿದೆ, ಏಕೆಂದರೆ ಇದರಿಂದ ಉತ್ತಮ ಕೆಲಸದ ಜೊತೆಗೆ ಜೀವನ ಸಮತೋಲನವನ್ನು ಸಕ್ರಿಯಗೊಳಿಸಬಹುದು ಎನ್ನುವುದು ಅವರ ಅನಿಸಿಕೆ.
ಈಗ ಹೊಸದೊಂದು ಪದ್ಧತಿ ಶುರುವಾಗಿದೆ. ಅದೇನೆಂದರೆ, ಬೇರ್ ಮಿನಿಮಮ್ ಮಂಡೆ ಎಂಬುದು. ಬೇರ್ ಮಿನಿಮಮ್ ಮಂಡೆ ಎನ್ನುವುದು ವಾರಾಂತ್ಯದ ನಂತರ ಉದ್ಭವಿಸುವ ಸಾಮಾನ್ಯ ಒತ್ತಡ ಮತ್ತು ನಿರೀಕ್ಷೆಗಳನ್ನು ಸರಾಗಗೊಳಿಸುವ ಮೂಲಕ ಕೆಲಸದ ವಾರಕ್ಕೆ ‘ಸೌಮ್ಯ ಆರಂಭ’ ನೀಡುವುದು ಎಂದರೆ, ವಾರಾಂತ್ಯದ ರಜೆಗಳಿಂದ ಪುನಃ ಸೋಮವಾರ ಕೆಲಸಕ್ಕೆ ಬರುವಾಗ ಆಗುವ ಬದಲಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ಶುರು ಮಾಡಲಾಗಿದೆ.
ಪ್ರತಿ ತಂಡಕ್ಕೆ ಇದು ವಿಭಿನ್ನವಾಗಿ ಕಾಣಿಸಬಹುದಾದರೂ, ಇದು ಸಾಮಾನ್ಯವಾಗಿ ಸೋಮವಾರದಂದು ಮನೆಯಿಂದಲೇ ಕೆಲಸ ಮಾಡುವ ಸಿಬ್ಬಂದಿಯನ್ನು ಒಳಗೊಳ್ಳುತ್ತದೆ ಮತ್ತು ಅವರ ಪಾತ್ರಕ್ಕೆ ಅಗತ್ಯವಿರುವ ಕನಿಷ್ಠ ಪ್ರಮಾಣದ ಕೆಲಸವನ್ನು ಮಾಡುತ್ತದೆ.
ಅಂತಿಮವಾಗಿ, ಕೆಲಸ ಮಾಡಲು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಈ ಹೊಸ ಕೆಲಸದ ಪ್ರವೃತ್ತಿಯನ್ನು ಆಸ್ಟ್ರೇಲಿಯಾದ ಅಡಿಲೇಡ್‌ನ 31 ವರ್ಷದ ಮಾರ್ಕೆಟಿಂಗ್ ಮ್ಯಾನೇಜರ್ ಕೈಟ್ಲಿನ್ ವಿಂಟರ್ ಪ್ರಾರಂಭಿಸಿದ್ದು, ಅದೀಗ ಭಾರಿ ಪ್ರಸಿದ್ಧವಾಗಿದೆ.