ಮಾನವೀಯತೆ ಅಂದ್ರೆ ಇದೇ ಅಲ್ವಾ…! ಜೀವದ ಹಂಗು ತೊರೆದು ನಾಯಿ ಕಾಪಾಡಿದ ಯುವಕರು

ಒಂದೆಡೆ ಪ್ರಾಣಿಗಳ ಮೇಲೆ ಚಿತ್ರಹಿಂಸೆಗಳು ಹೆಚ್ಚುತ್ತಿರುವ ನಡುವೆಯೇ ಮಾನವೀಯತೆ ಉಳಿದುಕೊಂಡಿದೆ ಎನ್ನುವಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವಿದ್ಯಾರ್ಥಿಗಳು ಕಾಲುವೆಯಿಂದ ನಾಯಿಯನ್ನು ರಕ್ಷಿಸುವ ಹೃದಯಸ್ಪರ್ಶಿ ವಿಡಿಯೋ ಇದಾಗಿದೆ.

ವಿಡಿಯೋದಲ್ಲಿ, ನಾಯಿಯೊಂದು ಕಾಲುವೆಗೆ ಬಿದ್ದದ್ದನ್ನು ನೋಡಬಹುದು. ನೀರಿನಲ್ಲಿ ತೇಲಾಡುತ್ತಾ ಸಾವನ್ನು ನಾಯಿ ಸಮೀಪಿಸುತ್ತಿತ್ತು. ಇದು ಬಟು ಅಕ್ಯೋಲ್ ಎನ್ನುವವರಿಗೆ ಸೇರಿದ ನಾಯಿ. ಅದರ ಜೊತೆ ವಾಕಿಂಗ್​ಗೆ ಹೊರಟಾಗ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಕಳಚಿ ಕಾಲುವೆಗೆ ಬಿತ್ತು.

ಸಹಾಯಕ್ಕಾಗಿ ಬಟು ಅವರು ಅಂಗಲಾಚುತ್ತಿದ್ದರು. ಆಗ ಇಬ್ಬರು 20 ವರ್ಷದ ಯುವಕರಾದ ಜ್ಯಾಕ್ ಸ್ಪೆನ್ಸರ್ ಫರ್ಮ್‌ಸ್ಟನ್ ಮತ್ತು ಬೆನ್ ಕ್ಯಾಂಪೋರ್ ಎನ್ನುವವರು ಸಹಾಯಕ್ಕೆ ಬಂದು ನಾಯಿಯನ್ನು ರಕ್ಷಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಯುವಕರು ನಾಯಿ ರಕ್ಷಿಸಲು ತೆಗೆದುಕೊಂಡಿರುವ ರಿಸ್ಕ್​ ನೋಡಿದರೆ ಎದೆ ಝಲ್​ ಎನ್ನುತ್ತದೆ. ತಮ್ಮ ಪ್ರಾಣದ ಹಂಗನ್ನು ತೊರೆದು ಅವರು ನಾಯಿಯನ್ನು ರಕ್ಷಿಸಿದ್ದು, ಅದರ ವಿಡಿಯೋ ನೋಡಿ ಯುವಕರಿಗೆ ನೆಟ್ಟಿಗರು ಸಲಾಂ ಎನ್ನುತ್ತಿದ್ದಾರೆ.

https://twitter.com/Dbelldb1/status/1625162968483725319?ref_src=twsrc%5Etfw%7Ctwcamp%5Etweetembed%7Ctwterm%5E1625162968483725319%7Ctwgr%5E8ee66337390b491899e04971cf8cbafc86ab1d55%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-manchester-students-pull-of-a-daring-stunt-to-rescue-a-dog-stuck-in-canal

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read