ಮುದ್ದು ಮುದ್ದು ಹುಲಿಮರಿಗಳ ಆಟದ ಕ್ಯೂಟ್​ ವಿಡಿಯೋ ವೈರಲ್​

ಸತ್ಪುರ: ಮಧ್ಯಪ್ರದೇಶದ ಸತ್ಪುರ ಹುಲಿ ಸಂರಕ್ಷಿತ ಪ್ರದೇಶವು ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಎರಡು ಹುಲಿ ಮರಿಗಳು ಪರಸ್ಪರ ಮುದ್ದಾಗಿ ಆಟವಾಡುತ್ತಿರುವ ಕ್ಯೂಟ್ ದೃಶ್ಯವನ್ನು ನೋಡಬಹುದು. ತುಂಬಾ ಬೇಜಾರಾದಾಗ ಈ ವಿಡಿಯೋ ಮನಸ್ಸಿಗೆ ಮುದ ನೀಡುವುದಂತೂ ಗ್ಯಾರಂಟಿ.

ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಫೀಲ್ಡ್ ಡೈರೆಕ್ಟರ್ ಎಲ್. ಕೃಷ್ಣಮೂರ್ತಿ ಅವರು ಈ ದೃಶ್ಯವನ್ನು ಸೆರೆಹಿಡಿದಿದ್ದು, ಅದನ್ನು ಶೇರ್​ ಮಾಡಿಕೊಂಡಿದ್ದಾರೆ. ಮುದ್ದು ಮರಿಗಳು ಸಂತೋಷದಿಂದ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ನಂತರ, ಹಲವಾರು ವೀಕ್ಷಣೆಗಳನ್ನು ಈ ವಿಡಿಯೋ ಕಂಡಿದೆ. ಪ್ರಾಣಿ ಲೋಕವೇ ವಿಚಿತ್ರ. ಅದರಲ್ಲಿಯೂ ಮುದ್ದು ಮೊಗದ ಕಂದಮ್ಮಗಳಂತೆ ಪ್ರಾಣಿಗಳ ಮರಿಗಳು ಕೂಡ ಅಷ್ಟೇ ಮನರಂಜನೆಯನ್ನು ಒದಗಿಸುತ್ತವೆ. ಇದು ನಮ್ಮ ದಿನವನ್ನು ಇನ್ನಷ್ಟು ಸೊಗಸು ಮಾಡಿದೆ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

https://www.youtube.com/watch?v=aL12pbZy7eo&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read