ನವದೆಹಲಿ: ಸ್ಕೋಡಾ ಸೆಡಾನ್ ಕಾರುಗಳ ತಯಾರಕರಾಗಿ ಬಹಳ ಪ್ರಸಿದ್ಧವಾಗಿದೆ. ಸ್ಕೋಡಾದ ಸೆಡಾನ್‌ಗಳು ಕೆಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹಳ ಜನಪ್ರಿಯವಾಗಿವೆ. ಈ ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ 2002 ರಲ್ಲಿ ಭಾರತದಲ್ಲಿ ಐಕಾನಿಕ್ ಕಾರ್ ಆಕ್ಟೀವಿಯಾದೊಂದಿಗೆ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿತು.
ಇದೀಗ ಇಂಡಿಯಾ-ಸ್ಪೆಕ್ ಸ್ಕೋಡಾ ಸ್ಲಾವಿಯಾ ಮತ್ತು ವೋಕ್ಸ್‌ವ್ಯಾಗನ್ ವರ್ಟಸ್ ಇತ್ತೀಚಿನ ಸುತ್ತಿನ ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ಪರೀಕ್ಷೆಗಳಲ್ಲಿ 5-ಸ್ಟಾರ್ ರೇಟಿಂಗ್ ಗಳಿಸಿವೆ. ಸ್ಕೋಡಾ ಕುಶಾಕ್ ಮತ್ತು ವೋಕ್ಸ್‌ವ್ಯಾಗನ್ ಟೈಗುನ್, ಸೆಡಾನ್‌ಗಳು ನವೀಕರಿಸಿದ ಸುರಕ್ಷತಾ ಪರೀಕ್ಷಾ ಪ್ರೋಟೋಕಾಲ್‌ಗಳ ಅಡಿಯಲ್ಲಿ ಫೈವ್ ಸ್ಟಾರ್ ರೇಟಿಂಗ್ ಪಡೆದಿವೆ.
ವಿನ್ಯಾಸ ಮತ್ತು ಸ್ಟೈಲಿಂಗ್ ಪ್ರದೇಶದಲ್ಲಿ ಸ್ಕೋಡಾ ಸ್ಲಾವಿಯಾ ಅತ್ಯಧಿಕ ಅಂಕಗಳನ್ನು ಗಳಿಸಿದೆ. ಇದು ಸರಿಯಾದ ಸುಂದರವಾದ ಸೆಡಾನ್ ಆಗಿದೆ. ಸ್ಕೋಡಾ ಸ್ಲಾವಿಯಾ ಆಧುನಿಕ ಸ್ಕೋಡಾದ ಎಲ್ಲಾ ವಿಶಿಷ್ಟ ವಿನ್ಯಾಸದ ಲಕ್ಷಣಗಳನ್ನು ಹೊಂದಿದೆ.
ವಯಸ್ಕರ ವಿಭಾಗದಲ್ಲಿ ಸ್ಕೋಡಾ ಸ್ಲಾವಿಯಾ, ವಿಡಬ್ಲ್ಯೂ ವರ್ಟಸ್ 34 ರಲ್ಲಿ 29.71 ಅಂಕಗಳನ್ನು ಪಡೆದರೆ, ಮಕ್ಕಳ ವಿಭಾಗದಲ್ಲಿ 49 ರಲ್ಲಿ 42 ಅಂಕಗಳನ್ನು ಗಳಿಸಿವೆ. GNCAP ನ ಹೊಸ ಪರೀಕ್ಷಾ ಪ್ರೋಟೋಕಾಲ್‌ಗಳ ಅಡಿಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದ ಮೊದಲ ಮಧ್ಯಮ ಗಾತ್ರದ ಸೆಡಾನ್‌ಗಳು ಸ್ಲಾವಿಯಾ ಮತ್ತು ವರ್ಟಸ್ ಆಗಿದೆ. ಆದಾಗ್ಯೂ, ಕುಶಾಕ್, ಟೈಗುನ್ ಮತ್ತು ಮಹೀಂದ್ರಾ ಸ್ಕಾರ್ಪಿಯೊ ಎನ್ ನವೀಕರಿಸಿದ ಪ್ರೋಟೋಕಾಲ್ ಅಡಿಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದ ಮೊದಲ ಮೂರು ವಾಹನಗಳಾಗಿವೆ.