HomeKarnatakaಅವಧಿ ಮೀರಿ ತೆರೆದಿದ್ದ ಬೆಂಗಳೂರಿನ ಪಬ್ ಗಳಿಗೆ ಬಿಗ್ ಶಾಕ್; ಡಿಸಿಪಿ ನೇತೃತ್ವದಲ್ಲಿ ದಾಳಿ

ಅವಧಿ ಮೀರಿ ತೆರೆದಿದ್ದ ಬೆಂಗಳೂರಿನ ಪಬ್ ಗಳಿಗೆ ಬಿಗ್ ಶಾಕ್; ಡಿಸಿಪಿ ನೇತೃತ್ವದಲ್ಲಿ ದಾಳಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪಬ್ ಗಳ ಮೇಲೆ ಡಿಸಿಪಿ ಟಿ.ಹೆಚ್.ಶೇಖರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಅವಧಿ ಮೀರಿ ತೆರೆದಿದ್ದ ಪಬ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ವಿವಿಧೆಡೆ ಪಬ್ ಗಳ ಮೇಲೆ ತಡ ರಾತ್ರಿ ದಿಢೀರ್ ದಾಳಿ ನಡೆಸಿದ ಪೊಲೀಸರು, 1 ಗಂಟೆಯೊಳಗೆ ಬಾಗಿಲು ಮುಚ್ಚಿಸಿದ್ದಾರೆ. ಅವಧಿ ಮೀರಿ ಪಬ್ ಗಳ ಬಾಗಿಲು ತೆರೆದಿರುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಸೇರಿದಂತೆ 15 ಪಬ್ ಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ತಡರಾತ್ರಿವರೆಗೂ ಪಬ್ ಗಳನ್ನು ತೆರೆದಿದ್ದ ಕಾರಣಕ್ಕೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಡಿಸಿಪಿ ಶೇಖರ್ ನೇತೃತ್ವದಲ್ಲಿ ವೀಕೆಂಡ್ ಹೊತ್ತಲ್ಲಿ ಸ್ಪೆಷಲ್ ಡ್ರೈವ್ ಮಾಡಲಾಗಿದ್ದು, ಪಬ್ ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular