ನೋಯ್ಡಾದ ಗಾರ್ಡನ್ ಗ್ಯಾಲೇರಿಯಾ ಮಾಲ್‌ನಲ್ಲಿ ಎರಡು ಗುಂಪುಗಳು ಹೊಡೆದಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಮಾಲ್ ನ ಗ್ರಾಹಕರು ಮತ್ತು ಸಿಬ್ಬಂದಿಗಳ ನಡುವೆ ನಡೆದಿರುವ ಜಗಳ ಇದಾಗಿದೆ ಎನ್ನಲಾಗಿದ್ದು, ಇಬ್ಬರು ಮಹಿಳೆಯರು ಮತ್ತು ಹಲವು ಪುರುಷರ ಗುಂಪು ಜೋರು ಗಲಾಟೆ ಮಾಡಿದ್ದಾರೆ. ಅವರನ್ನು ಬೌನ್ಸರ್‌ಗಳು ಸಮಾಧಾನ ಪಡಿಸಿ, ಸಮಸ್ಯೆಯನ್ನು ಪರಿಹರಿಸಲು ನೆರವಾಗುವುದು ವಿಡಿಯೋದಲ್ಲಿ ಕಂಡುಬಂದಿದೆ.
ವರದಿಯ ಪ್ರಕಾರ ಮದ್ಯದ ಅಮಲಿನಲ್ಲಿ ಮೌಖಿಕ ಭಿನ್ನಾಭಿಪ್ರಾಯದ ನಂತರ ಗಲಾಟೆ ಆರಂಭವಾಗಿದೆ . ವೈರಲ್ ವಿಡಿಯೋ ಮೂಲಕ ಗಮನ ಸೆಳೆದಿರುವ ಘಟನೆಯ ದಿನಾಂಕ ಮತ್ತು ಸಮಯವನ್ನು ಅರ್ಥಮಾಡಿಕೊಳ್ಳಲು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಆದರೆ ಗಲಾಟೆಯನ್ನು ಮರೆಮಾಚುವ ಮೂಲಕ ತಮ್ಮ ಖ್ಯಾತಿಯನ್ನು ಉಳಿಸಲು ಪ್ರಯತ್ನಿಸುತ್ತಿರುವ ಮಾಲ್ ವರದಿಗಳು ಸುಳ್ಳೆಂದಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ನೋಯ್ಡಾದ ಗಾರ್ಡನ್ ಗ್ಯಾಲೇರಿಯಾ ಮಾಲ್‌ನಲ್ಲಿರುವ ಎಫ್ ಬಾರ್ ಮತ್ತು ಲಾಂಜ್‌ನಲ್ಲಿ ಜಗಳ ನಡೆದಿತ್ತು. ಕುಡಿದ ಅಮಲಿನಲ್ಲಿ ಎರಡು ಗುಂಪುಗಳು ಪರಸ್ಪರ ಜಗಳವಾಡಿಕೊಂಡಿದ್ದವು, ಏತನ್ಮಧ್ಯೆ 2022 ರಲ್ಲಿ ಈ ಬಾರ್‌ನಲ್ಲಿ ನಡೆದ ಇದೇ ರೀತಿಯ ಜಗಳವು ಗ್ರಾಹಕರೊಬ್ಬರ ಸಾವಿಗೆ ಕಾರಣವಾಯಿತು. ಬೌನ್ಸರ್‌ಗಳ ಗುಂಪೊಂದು ವ್ಯಕ್ತಿಯನ್ನು ಕ್ರೂರವಾಗಿ ಹೊಡೆದ ನಂತರ ಹತ್ಯೆ ಮಾಡಿತ್ತು ಎಂಬ ವರದಿ ಹೊರಬಿದ್ದಿತ್ತು. ಬಾರ್ ಜನರಿಗೆ ಅಕ್ರಮ ಮದ್ಯವನ್ನು ಸರಬರಾಜು ಮಾಡುತ್ತವೆ ಎಂಬ ಆರೋಪಗಳಿವೆ.