ರಾಜ್ಯದ ಜನತೆಗೆ ಮತ್ತೊಂದು ಶಾಕ್: ಹೆಚ್ಚಿದ ವೈರಲ್ ಜ್ವರ; ಆಸ್ಪತ್ರೆಗಳಲ್ಲಿ ಜನಸಂದಣಿ

ಬೆಂಗಳೂರು: ರಾಜ್ಯದಲ್ಲಿ ಬಿರು ಬೇಸಿಗೆ ಬಿಸಿಲ ನಡುವೆ ವೈರಲ್ ಜ್ವರ ಬಾಧೆ ಹೆಚ್ಚಾಗುತ್ತಿದೆ ತಲೆನೋವು, ಗಂಟಲು ನೋವು, ಕೆಮ್ಮು, ಶೀತ ಸೇರಿದಂತೆ ವೈರಲ್ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇದರೊಂದಿಗೆ ಹೆಚ್3ಎನ್2 ವೈರಸ್ ಕೂಡ ಹೆಚ್ಚಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ.

ವೈರಲ್ ಫೀವರ್ ಲಕ್ಷಣವೆಂದರೆ ಮೂರ್ನಾಲ್ಕು ದಿನ ವಿಪರೀತ ಜ್ವರ, ಚಳಿ, ನೆಗಡಿ, ಕೆಮ್ಮು, ತಲೆ ಭಾರ, ಮೈಕೈ ನೋವು, ಕೆಲವರಲ್ಲಿ ಉಸಿರಾಟದ ತೊಂದರೆ ವಾಂತಿ, ಭೇದಿ, ಹೊಟ್ಟೆ ನೋವು ಕಣ್ಣು ಕೆಂಪಾಗುವುದು ಕಾಣಿಸಿಕೊಳ್ಳುತ್ತಿದೆ.

ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ವೈರಲ್ ಫೀವರ್ ಹೆಚ್ಚಾಗಿದ್ದು, ಆಸ್ಪತ್ರೆಗಳಲ್ಲಿ ಭಾರಿ ಜನಸಂದಣಿ ಕಂಡುಬರುತ್ತಿದೆ. ಧೂಳು ವಾತಾವರಣ ಮತ್ತು ವೈರಾಣು ಜ್ವರ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.

ಐದು ವರ್ಷದೊಳಗಿನ ಮಕ್ಕಳು, ವಯಸ್ಕರಲ್ಲಿ ಬೇಗನೆ ವೈರಲ್ ಜ್ವರ ಹಬ್ಬುತ್ತಿದೆ. ನಿರಂತರ ಮೂರು ದಿನದಿಂದ ಜ್ವರ ವಿದ್ದರೆ ವೈದ್ಯರನ್ನು ಸಂಪರ್ಕಿಸಿ. ಆಗಾಗ ಕೈಗಳನ್ನು ಸೋಪಿನಿಂದ ತೊಳೆಯಿರಿ. ಜನಸಂದಣಿ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕು. ದೇಹ ಶುಷ್ಕವಾಗಲು ಅವಕಾಶ ನೀಡದಂತೆ ಸಾಕಷ್ಟು ನೀರು ಕುಡಿಯಬೇಕು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read