ತೆಲುಗಿನ ‘ಅರ್ಜುನ್ ರೆಡ್ಡಿ’ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಅಂಗವಾಗಿ ವಿಶೇಷ ಉಡುಗೊರೆ ನೀಡ್ತಿದ್ದಾರೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಸಮಯದಲ್ಲಿ ಅಭಿಮಾನಿಗಳಿಗೆ ಅತ್ಯಾಕರ್ಷಕ ಉಡುಗೊರೆಗಳನ್ನು ನೀಡುತ್ತಿರುವ ಉಪಕ್ರಮದ ಭಾಗವಾಗಿ, ಅವರು 100 ಅಭಿಮಾನಿಗಳಿಗೆ ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ಆಯೋಜಿಸಿದ್ದಾರೆ.
ತಮ್ಮ ದೇವೆರಾ ಸಾಂಟಾ ಉಪಕ್ರಮದ ಭಾಗವಾಗಿ ಈ ಹೊಸ ಯೋಜನೆಯನ್ನು ನಟ ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ.
ಐದು ದಿನಗಳ ಪ್ರವಾಸದಲ್ಲಿ 100 ಅಭಿಮಾನಿಗಳು ಮನಾಲಿಗೆ ಪ್ರಯಾಣಿಸುತ್ತಾರೆ ಮತ್ತು ದೇವಾಲಯಗಳು ಮತ್ತು ಮಠಗಳಿಗೆ ಭೇಟಿ ನೀಡುವುದರ ಜೊತೆಗೆ ಪರ್ವತಗಳ ಸೌಂದರ್ಯವನ್ನು ಅನುಭವಿಸುತ್ತಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ವಿಜಯ್ ದೇವರಕೊಂಡ ವಿಷಯ ಹಂಚಿಕೊಂಡಿದ್ದಾರೆ.
“ನಾನು ನಿಮ್ಮಲ್ಲಿ 100 ಜನರನ್ನು 5 ದಿನಗಳ ಪ್ರವಾಸಕ್ಕೆ ಮನಾಲಿಗೆ ಕಳುಹಿಸುತ್ತಿದ್ದೇನೆ. ನೀವು ಹಿಮದಿಂದ ಆವೃತವಾದ ಪರ್ವತಗಳನ್ನು ನೋಡಲಿದ್ದೀರಿ. ನೀವು ದೇವಾಲಯಗಳು, ಮಠಗಳನ್ನು ನೋಡಲು ಹೋಗುತ್ತೀರಿ ಮತ್ತು ನಾವು ಸಾಕಷ್ಟು ಚಟುವಟಿಕೆಗಳನ್ನು ಯೋಜಿಸಿದ್ದೇವೆ! ನೀವು 18-ಪ್ಲಸ್ ವಯಸ್ಸಿನವರಾಗಿರಬೇಕು. ಲಗತ್ತಿಸಲಾದ ‘ದೇವೆರಾ ಸಾಂಟಾ ಗೂಗಲ್ ಡಾಕ್ಯುಮೆಂಟ್ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಾವು ನಿಮ್ಮಲ್ಲಿ 100 ಮಂದಿಯನ್ನು ಆಯ್ಕೆ ಮಾಡಲಿದ್ದೇವೆ.” ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
ವಿಜಯ್ ದೇವರಕೊಂಡ ಅವರು ಕೆಲವು ವರ್ಷಗಳ ಹಿಂದೆ ಈ ಸಂಪ್ರದಾಯವನ್ನು ಪ್ರಾರಂಭಿಸಿದರು. ಮೊದಲ ವರ್ಷದಲ್ಲಿ, ಅವರು ಹೈದರಾಬಾದ್‌ನ ಜವಾಹರಲಾಲ್ ನೆಹರು ಆರ್ಕಿಟೆಕ್ಚರ್ ಮತ್ತು ಫೈನ್ ಆರ್ಟ್ಸ್ ವಿಶ್ವವಿದ್ಯಾಲಯಕ್ಕೆ 50 ಅಭಿಮಾನಿಗಳನ್ನು ಆಯ್ಕೆ ಮಾಡಿ ಕಳಿಸಿದ್ದರು.