Viral Video: ʼಮೆಟ್ರೋʼ ದಲ್ಲಿ ರಾಜಾರೋಷವಾಗಿ ಬೀಡಿ ಸೇದಿದ ವೃದ್ಧ..!

ಒಂದಿಲ್ಲೊಂದು ಕಾರಣಕ್ಕೆ ದೆಹಲಿ ಮೆಟ್ರೋ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಈ ಬಾರಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮೆಟ್ರೋದ ಒಳಗೆ ಕೂತು ಬೀಡಿ ಸೇದಿದ್ದಾರೆ. ಈ ಘಟನೆಯ ನಿಖರವಾದ ದಿನಾಂಕ ಮತ್ತು ಸ್ಥಳದ ಬಗ್ಗೆ ಇನ್ನೂ ಮಾಹಿತಿ ತಿಳಿದಿಲ್ಲ.

ವೃದ್ಧನೊಬ್ಬ ತನ್ನ ಜೇಬಿನಿಂದ ಬೀಡಿಯನ್ನು ತೆಗೆದಿದ್ದಾರೆ. ಪ್ರಯಾಣಿಕರಿಂದ ತುಂಬಿರುವ ಮೆಟ್ರೋದಲ್ಲಿ ಅವರು ಬೀಡಿಯನ್ನು ಹಚ್ಚಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಬೀಡಿ ಹಚ್ಚಿದ ವ್ಯಕ್ತಿಯ ಬಗ್ಗೆ ಇತರೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಕಾಣಬಹುದಾಗಿದೆ. ವಿರೋಧ ವ್ಯಕ್ತಪಡಿಸಿದ ಪ್ರಯಾಣಿಕರಿಗೆ ಈತ ನನ್ನ ಬಳಿಯೂ ಟಿಕೆಟ್​ ಇದೆ ಎಂದು ಉತ್ತರ ನೀಡಿದ್ದಾನೆ ಎನ್ನಲಾಗಿದೆ.

ಈ ವಿಡಿಯೋ ಆನ್​ಲೈನ್​ನಲ್ಲಿ ಸಖತ್​ ವೈರಲ್​ ಆಗಿದೆ. ಅನೇಕರು ದೆಹಲಿ ಮೆಟ್ರೋ ರೈಲು ನಿಗಮ ಹಾಗೂ ದೆಹಲಿ ಮೆಟ್ರೋ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಘಟನೆ ಬಗ್ಗೆ ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಈ ಘಟನೆ ಬಗ್ಗೆ ಈವರೆಗೆ ಯಾವುದೇ ಮೆಟ್ರೋ ಅಧಿಕಾರಿಗಳು ಅಧಿಕೃತ ಹೇಳಿಕೆ ನೀಡಿಲ್ಲ.

https://twitter.com/i/status/1706217234740482536

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read