alex Certify ಎಲ್ಲಾ ಮಾದರಿಯ ಕ್ರಿಕೆಟ್ ಗೆ ಮುರಳಿ ವಿಜಯ್ ನಿವೃತ್ತಿ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲಾ ಮಾದರಿಯ ಕ್ರಿಕೆಟ್ ಗೆ ಮುರಳಿ ವಿಜಯ್ ನಿವೃತ್ತಿ ಘೋಷಣೆ

ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ ಮುರಳಿ ವಿಜಯ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ವಿಜಯ್ ಒಟ್ಟು 87 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 4490 ರನ್ ಗಳಿಸಿದ್ದಾರೆ. ಅವರು 61 ಟೆಸ್ಟ್ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಮೂಲಕ 38.29 ಸರಾಸರಿಯಲ್ಲಿ 3982 ರನ್ ಗಳಿಸಿದ್ದಾರೆ.

ಭಾರತ ತಂಡಕ್ಕಾಗಿ 17 ODI ಮತ್ತು 9 T20I ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿವೃತ್ತಿ ಬಗ್ಗೆ ಟ್ವಿಟರ್‌ನಲ್ಲಿ ಹೃದಯಸ್ಪರ್ಶಿ ಪೋಸ್ಟ್ ಹಾಕಿರುವ ವಿಜಯ್ ಅವರು ಹೊಸ ಅವಕಾಶಗಳನ್ನು ಅನ್ವೇಷಿಸಲು ಮುಕ್ತವಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ತಮ್ಮ ಪೋಸ್ಟ್ ನಲ್ಲಿ 2002 ರಿಂದ 2018 ರವರೆಗಿನ ತಮ್ಮ ವೃತ್ತಿಜೀವನವನ್ನು ನೆನಪಿಸಿಕೊಂಡಿರುವ ಅವರು ತಮ್ಮ ವೃತ್ತಿ ಬದುಕಿನ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...