ಬೆಂಗಳೂರು: ಬೆಂಗಳೂರಿನಲ್ಲಿ ಫ್ಲೈ ಓವರ್ ನಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆನಂದರಾವ್ ಸರ್ಕಲ್ ಫ್ಲೈ ಓವರ್ ಮೇಲಿಂದ ಬಿತ್ತು ವ್ಯಕ್ತಿ ಮೃತಪಟ್ಟ ಘಟನೆ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ನಡೆದಿದೆ.
ಸ್ಥಳಕ್ಕೆ ಉಪ್ಪಾರ ಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿ ಕುಡಿದ ಮಲಿನಲ್ಲಿ ಫ್ಲೈ ಓವರ್ ನಿಂದ ಬಿದ್ದನಾ ಅಥವಾ ಯಾರಾದರೂ ಆತನನ್ನು ತಳ್ಳಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.