ಧನವಂತರಾಗಲು ತ್ರಿಶಕ್ತಿ ಪೂಜೆಯನ್ನು ಈ ರೀತಿ ಮಾಡಿ

ಎಲ್ಲರಿಗೂ ತಾವು ಧನವಂತರಾಗಬೇಕು. ಸಂಪತ್ತು ಹೆಚ್ಚಾಗಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಹಲವು ಬಗೆಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಅಂಥವರು ತ್ರಿಶಕ್ತಿ ಪೂಜೆ ಮಾಡಿದರೆ ನಿಮಗೆ ಲಕ್ಷ್ಮಿಯ ಅನುಗ್ರಹದ ಜೊತೆಗೆ ಪಾರ್ವತಿ ಮತ್ತು ಸರಸ್ವತಿ ದೇವಿಯ ಅನುಗ್ರಹ ಕೂಡ ಸಿಗುತ್ತದೆ. ಹಾಗಾದ್ರೆ ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ದೇವರ ಮನೆಯಲ್ಲಿ ಮೂರು ವೀಳ್ಯದೆಲೆಯನ್ನಿಟ್ಟು ಅದರ ಮೇಲೆ ಅರಶಿನದ ಮೂರು ಉಂಡೆಗಳನ್ನು ಇಡಿ. ಬಳಿಕ ಅದರ ಮೇಲೆ ಅರಶಿನ, ಕುಂಕುಮ ಹಾಕಿ. ಈ ಮೂರು ಉಂಡೆಗಳನ್ನು ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿ ಎಂದು ಕರೆಯಲಾಗುತ್ತದೆ.

ಬಳಿಕ ಈ ಅರಶಿನದ ಉಂಡೆಗಳ ಮುಂದೆ ಒಂದೊಂದು ದೀಪವನ್ನು ಇಟ್ಟು ಅದಕ್ಕೆ ಮೂರು ಬತ್ತಿಯನ್ನು ಜೋಡಿಸಿ ತುಪ್ಪ ಹಾಕಿ ದೀಪ ಬೆಳಗಿಸಬೇಕು. ಹಾಗೇ ದುರ್ಗೆಗೆ ಕೆಂಪು ಹೂಗಳನ್ನು, ಲಕ್ಷ್ಮಿದೇವಿಗೆ ಹಳದಿ ಹೂಗಳನ್ನು ಹಾಗೂ ಸರಸ್ವತಿಗೆ ಬಿಳಿ ಬಣ್ಣದ ಹೂಗಳನ್ನು ಇಟ್ಟು ಪೂಜೆ ಮಾಡಿ. ಹಾಗೇ ಮೂರು ದೇವರಿಗೆ ತಾಂಬೂಲವನ್ನು ಇಡಿ. ಮತ್ತು ನೈವೇದ್ಯವನ್ನು ಅರ್ಪಿಸಬೇಕು. ಇದರಿಂದ ನಿಮ್ಮ ಸಂಪತ್ತು ಜಾಸ್ತಿಯಾಗಿ ಮನೆಯಲ್ಲಿ ಸುಖ-ಶಾಂತಿ ನೆಲೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read