ವೈರಸ್ ತಡೆಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲಗುವ ಕೋಣೆಯಲ್ಲಿ ನಾವು ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ಆದ್ರೆ ಅದ್ರ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಮನೆಯ ಮೂಲೆ ಮೂಲೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಕೆಲವೇ ನಿಮಿಷದಲ್ಲಿ ಬೆಡ್ ರೂಮ್ ಸ್ವಚ್ಛಗೊಳಿಸುವ ಟಿಪ್ಸ್ ಇಲ್ಲಿದೆ.
ಕೊಳಕಾದ ಬಟ್ಟೆ ಹಾಗೂ ಪರದೆಯನ್ನು ತೆಗೆದು ವಾಶಿಂಗ್ ಮಶಿನ್ ಗೆ ಹಾಕಿ. ಫೋಟೋ, ಪಿಠೋಪಕರಣದಲ್ಲಿರುವ ಧೂಳನ್ನು ತೆಗೆಯಿರಿ. ವ್ಯಾಕ್ಯೂಮ್ ಕ್ಲೀನರ್ ಇಲ್ಲದವರು ಬಟ್ಟೆ ಬಳಸಿ ಸ್ವಚ್ಛಗೊಳಿಸಬೇಕು. ಹಾಸಿಗೆಯನ್ನು ಮಂಚದಿಂದ ಮೇಲೆತ್ತಿ ಧೂಳು ಕೊಡವಿ ಸ್ವಚ್ಛಗೊಳಿಸಿ. ಸಾಧ್ಯವಾದಲ್ಲಿ ಇದನ್ನು ಬಿಸಿಲಿಗೆ ಇಡಬಹುದು.
ಕಾರ್ಪೆಟ್ ಸ್ವಚ್ಛಗೊಳಿಸಲು ಅದಕ್ಕೆ ಅಡುಗೆ ಸೋಡ ಹಾಕಿ. ಸ್ವಚ್ಛಗೊಳಿಸುವಾಗ ಅಡುಗೆ ಸೋಡಾ ಹಾಕಿದ್ರೆ ಕೆಟ್ಟ ವಾಸನೆ ಹೋಗಿ ಹೊಸದರಂತಾಗುತ್ತದೆ. ಟಿವಿ, ಎಸಿ ಕವರ್ ತೆಗೆದು ಸ್ವಚ್ಛಗೊಳಿಸಿ. ಕವರ್ ಇದ್ದರೆ ಟಿವಿ ಕಡಿಮೆ ಪ್ರಮಾಣದಲ್ಲಿ ಕೊಳಕಾಗುತ್ತದೆ. ಪ್ರತಿ ದಿನ ಇವೆಲ್ಲ ಸಾಧ್ಯವಿಲ್ಲ. ಪ್ರತಿ ದಿನ ಸಾಧ್ಯವಾದಷ್ಟು ಮೂಲೆಯಲ್ಲಿನ ಕಸ ತೆಗೆದು ಸ್ವಚ್ಛಗೊಳಿಸಿ. ವಾರಕ್ಕೆ ಒಮ್ಮೆ ಈ ಮೇಲಿನ ಕೆಲಸಗಳನ್ನು ಮಾಡಿ.