ನಾಯಿಗಳ ಸ್ವಭಾವವೇ ಕುತೂಹಲವಾದದ್ದು. ಮನುಷ್ಯರನ್ನು ಅವು ಸುಲಭದಲ್ಲಿ ಅನುಸರಿಸುತ್ತವೆ. ಆದರೆ ಇಲ್ಲೊಂದು ನಾಯಿಯ ಹವ್ಯಾಸ ಕುತೂಹಲಕಾರಿಯಾಗಿದ್ದು, ಅದೀಗ ವೈರಲ್ ಆಗಿದೆ. ಅದೇನೆಂದರೆ ಬಿಂದಿ ಎಂಬ ಹೆಸರಿನ ಈ ನಾಯಿ ದಿನವೂ ಸುದ್ದಿಗಳನ್ನು ನೋಡುವುದನ್ನು ಇಷ್ಟಪಡುತ್ತದೆಯಂತೆ.
ಈ ನಾಯಿ ತನ್ನದೇ ಆದ ಇನ್‌ಸ್ಟಾಗ್ರಾಮ್ ಪುಟವನ್ನು ಹೊಂದಿದ್ದು, ಅದರ ಮಾಲೀಕರು ನಾಯಿಯ ಕುತೂಹಲದ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ದಿನವೂ ನಾಯಿ ಬೆಳಿಗ್ಗೆ ಟಿವಿಯ ಮುಂದೆ ಕುಳಿತು ಸುದ್ದಿಗಳನ್ನು ಆಲಿಸುವುದಾಗಿ ಅದರಲ್ಲಿ ತಿಳಿಸಲಾಗಿದೆ.
ಬಿಂದಿಗಾಗಿ ಒಂದು ತುಪ್ಪಳದ ಹಾಸಿಗೆಯನ್ನು ರೆಡಿ ಮಾಡಿ ಇರಿಸಲಾಗಿದೆ. ಇದಕ್ಕಾಗಿಯೇ ಒಂದು ಖುರ್ಚಿ ಇದೆ. ಕುತೂಹಲದ ವಿಷಯ ಎಂದರೆ ಕರೆಕ್ಟಾಗಿ ಬೆಳಗ್ಗೆ ನ್ಯೂಸ್ ಬರುವ ಟೈಂನಲ್ಲಿ ಬಿಂದಿ ಖುದ್ದು ಟಿ.ವಿಯನ್ನು ಹಚ್ಚಿ ನ್ಯೂಸ್ ನೋಡುತ್ತದೆ. ಕುತೂಹಲದಿಂದ ಒಂದೊಂದು ವಿಷಯವನ್ನೂ ಆಲಿಸುತ್ತದೆ.
ಮನುಷ್ಯರಂತೆಯೇ ಅದು ಟಿ.ವಿ.ಯಲ್ಲಿ ಬರುತ್ತಿರುವ ಸುದ್ದಿಗಳನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ರೆಸ್ಪಾನ್ಸ್ ಕೂಡ ಮಾಡುತ್ತದೆ.
ಇದರ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ನಾಯಿ ಹೋದ ಜನ್ಮದಲ್ಲಿ ಪತ್ರಕರ್ತನೋ, ಪತ್ರಕರ್ತೆಯೋ ಆಗಿ ಕೆಲಸ ಮಾಡಿತ್ತಿರಬೇಕು ಎಂದು ಕೆಲವರು ತಮಾಷೆ ಮಾಡುತ್ತಿದ್ದರೆ, ಇನ್ನು ಕೆಲವರು ಅದಕ್ಕೆ ಜರ್ನಲಿಸ್ಟ್ ಆಗುವ ಆಸೆ ಇತ್ತು, ಆದರೆ ಅದು ಆಗಲು ಸಾಧ್ಯವಾಗಿರಲಿಲ್ಲ ಎಂದು ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ.
https://youtu.be/Xa8Je_9kZnc