HomeInternationalಅಮೆರಿಕಾದ ʼಮೋಸ್ಟ್‌ ವಾಂಟೆಡ್‌ʼ ಪಟ್ಟಿಯಲ್ಲಿದ್ದಾನೆ ಗುಜರಾತ್‌ ನ ಈ ವ್ಯಕ್ತಿ

ಅಮೆರಿಕಾದ ʼಮೋಸ್ಟ್‌ ವಾಂಟೆಡ್‌ʼ ಪಟ್ಟಿಯಲ್ಲಿದ್ದಾನೆ ಗುಜರಾತ್‌ ನ ಈ ವ್ಯಕ್ತಿ

2015ರಲ್ಲಿ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ತನ್ನ ಪತ್ನಿಯನ್ನು ಕೊಂದ ಆರೋಪದ ಮೇಲೆ ಭಾರತದ ಗುಜರಾತ್‌ನ ಭದ್ರೇಶ್‌ ಕುಮಾರ್ ಚೇತನ್‌ಭಾಯ್ ಪಟೇಲ್‌ ನನ್ನು ಎಫ್‌ಬಿಐ ಹುಡುಕುತ್ತಿದೆ.

ಎಫ್‌ಬಿಐ ಪ್ರಕಾರ, ಭದ್ರೇಶ್‌ ಪಟೇಲ್ ತನ್ನ ಪತ್ನಿ ಪಲಕ್ ಅವರನ್ನು ಒಂದು ಡೊನಟ್ ಅಂಗಡಿಯಲ್ಲಿ ಕೊಲೆ ಮಾಡಿದ್ದಾನೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಭದ್ರೇಶ್‌ ಪಟೇಲ್ ತನ್ನ ಪತ್ನಿಯನ್ನು ಹಲವಾರು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಭದ್ರೇಶ್‌‌ ಪಟೇಲ್ ನನ್ನು ಶಸ್ತ್ರಸಜ್ಜಿತ ಮತ್ತು ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಎಫ್‌ಬಿಐ ತನ್ನ ಹತ್ತು ‌ʼಮೋಸ್ಟ್‌ ವಾಂಟೆಡ್ʼ ಪರಾರಿಯಾದವರ ಪಟ್ಟಿಯಲ್ಲಿ ಅವನನ್ನು ಸೇರಿಸಿದೆ. ಪಟೇಲ್‌ನ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಎಫ್‌ಬಿಐಗೆ ತಿಳಿಸುವಂತೆ ಮನವಿ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular