ಬಾಯಲ್ಲಿ ನೀರೂರಿಸುತ್ತೆ ನವಣೆ ಅಕ್ಕಿಯ ಸಿಹಿ ‘ಹಾಲುಬಾಯಿ’

ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಾಡುವುದಕ್ಕೆ ಅಷ್ಟೇನೋ ಕಷ್ಟವಿಲ್ಲ. ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸಿದಾಗ ಸಿರಿಧಾನ್ಯದಿಂದ ಹಾಲುಬಾಯಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಿರಿ.

ಬೇಕಾಗುವ ಸಾಮಗ್ರಿ:

½ ಕಪ್ ನವಣೆ ಅಕ್ಕಿ, ಬೆಲ್ಲ -1 ಕಪ್, ಏಲಕ್ಕಿ-ಚಿಟಿಕೆ, ತೆಂಗಿನಕಾಯಿ ತುರಿ-1/2 ಕಪ್, ನೀರು-ಅಗತ್ಯವಿರುವಷ್ಟು.

ಮಾಡುವ ವಿಧಾನ:

ನವಣೆ ಅಕ್ಕಿಯನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ನೆನೆಸಿಡಿ. ನಂತರ ಬೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ¼ ಕಪ್ ನೀರು ಹಾಕಿ ಗ್ಯಾಸ್ ಮೇಲಿಟ್ಟು ಬೆಲ್ಲವನ್ನು ಕರಗಿಸಿಕೊಳ್ಳಿ. ನಂತರ ಅದನ್ನು ಹಾಲು ಬಾಯಿ ಮಾಡುವ ಪಾತ್ರೆಗೆ ಸೋಸಿಕೊಳ್ಳಿ.

ನಂತರ ಈ ನವಣೆ ಅಕ್ಕಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ತೆಂಗಿನತುರಿ ಸೇರಿಸಿ ಅದನ್ನು ಅಕ್ಕಿಯನ್ನು ನೆನೆಸಿಟ್ಟ ನೀರನ್ನು ಹಾಕಿ ರುಬ್ಬಿಕೊಳ್ಳಿ. ಇದನ್ನು ಬೆಲ್ಲದ ಪಾಕವಿರುವ ಪಾತ್ರೆಗೆ ಹಾಕಿಕೊಳ್ಳಿ.

ನಂತರ ಹದವಾದ ಉರಿಯಲ್ಲಿ ಇಟ್ಟುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟು ತಳ ಬಿಡುವವರೆಗೆ ಮಗಚುತ್ತಾ ಇರಿ. ನಂತರ ಗ್ಯಾಸ್ ಆಫ್ ಮಾಡಿ. ತುಪ್ಪ ಸವರಿದ ಪಾತ್ರೆಗೆ ಇದನ್ನು ಹಾಕಿ ಆರಿದ ಮೇಲೆ ಕತ್ತರಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read