ಬೆಂಗಳೂರು: ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹಳೆಯ ಡಿಪೈಂಡ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಎಲ್ಲಾ ಪ್ರಸ್ತಾವನೆಗಳ ಸಾಪ್ಟ್ ಪ್ರತಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಪೈಂಡ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಸಂಬಂಧ ಈಗಾಗಲೇ ಬೆಂಗಳೂರು ಮತ್ತು ಮೈಸೂರು ವಿಭಾಗದ ಜಿಲ್ಲೆಗಳಿಂದ ಪ್ರಸ್ತಾವನೆಗಳು ಭೌತಿಕವಾಗಿ ಸ್ವೀಕೃತವಾಗುತ್ತಿದ್ದು, ಸರ್ಕಾರದ ನಿರ್ದೇಶನದಂತೆ ಎಲ್ಲಾ ಪ್ರಸ್ತಾವನೆಗಳ ಸಾಪ್ಟ್ ಪ್ರತಿಯನ್ನು ಸಲ್ಲಿಸಲು ಸೂಚಿಸಿರುತ್ತಾರೆ.
ಪ್ರಯುಕ್ತ, ಬೆಂಗಳೂರು ಮೈಸೂರು ವಿಭಾಗದ ಉಪನಿರ್ದೇಶಕರುಗಳು ತಮ್ಮ ಜಿಲ್ಲೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಶಿಕ್ಷಕರುವಾರು ತಾಲ್ಲೂಕುವಾರು ಪ್ರತ್ಯೇಕವಾಗಿ 50 MB ಗಳಿಗಿಂತ ಕಡಿಮೆ ಇರುವಂತೆ ಪರಿಷ್ಕರಿಸಿ ಸ್ಕ್ಯಾನ್ ಮಾಡಿ ಸಾಪ್ಟ್ ಪರಿಷ್ಕೃತ ಪ್ರತಿಯನ್ನು ದಿನಾಂಕ: 23-08-2024 ರೊಳಗೆ ಈ ಕಛೇರಿಗೆ ಮುದ್ದಾಂ ಸಲ್ಲಿಸಲು ತಿಳಿಸಿದೆ.
ಈಗಾಗಲೇ ಪ್ರಸ್ತಾವನೆಗಳನ್ನು ಸಲ್ಲಿಸಿರುವ ಜಿಲ್ಲೆಯವರು, ಸದರಿ ಪ್ರಸ್ತಾವನೆಗಳನ್ನು ಕಚೇರಿಯಿಂದ ಹಿಂಪಡೆದು, ಈ ಮೇಲೆ ಸೂಚಿಸಿರುವಂತೆ ತುರ್ತಾಗಿ ಕ್ರಮವಹಿಸಿ ನಿಗದಿತ ದಿನಾಂಕದೊಳಗೆ ಭೌತಿಕ ಮತ್ತು ಸಾಫ್ಟ್ ಪ್ರಸ್ತಾವನೆಗಳನ್ನು ಕಛೇರಿಗೆ ಮರುಸಲ್ಲಿಸಲು ಸಲ್ಲಿಸಲು ತಿಳಿಸಿದೆ. ಇದು ಕಾಲಮಿತಿ ಪ್ರಕರಣವಾಗಿದ್ದು, ಯಾವುದೇ ವಿಳಂಬಕ್ಕೆ ಈ ಕಛೇರಿಯು ಜವಾಬ್ದಾರಿಯಾಗಿರುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ.