
ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕೆ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಅಸ್ಸಾಂ ರಾಜ್ಯ ಸಾರಿಗೆ ನಿಗಮ (ASTC) ಗೆ 100 ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಸುತ್ತಿದೆ. 9 ಮೀಟರ್ ಉದ್ದದ ಹವಾನಿಯಂತ್ರಿತ ಟಾಟಾ ಅಲ್ಟ್ರಾ ಎಲೆಕ್ಟ್ರಿಕ್ ಬಸ್ ಗಳು ಗುವಾಹತಿ ನಗರದಲ್ಲಿ ಸಂಚರಿಸಲಿವೆ.
ಈ ಬಸ್ ಗಳು ಅತ್ಯಂತ ಸುರಕ್ಷಿತ, ಆರಾಮದಾಯಕ ಮತ್ತು ಅನುಕೂಲಕರವಾದ ನಗರ ಪ್ರಯಾಣದ ಅನುಭವವನ್ನು ನೀಡಲಿವೆ. ಈ ಶೂನ್ಯ ಮಾಲಿನ್ಯ ಬಸ್ ಗಳು ಮುಂದಿನ ಪೀಳಿಗೆಯ ಶಿಲ್ಪಶಾಸ್ತ್ರಕ್ಕೆ ಅನುಗುಣವಾಗಿ ಇತ್ತೀಚಿನ ವೈಶಿಷ್ಟ್ಯತೆಗಳೊಂದಿಗೆ ದೇಶೀಯವಾಗಿ ತಯಾರಿಸಲಾಗಿದೆ.
ಸುಧಾರಿತ ಅತ್ಯಾಧುನಿಕ ಬ್ಯಾಟರಿಯಿಂದ ಚಲಾಯಿಸಲ್ಪಡುವ ಈ ಬಸ್ ಗಳು ಸಂಪೂರ್ಣ ಪರಿಸರಸ್ನೇಹಿಯಾಗಿವೆ. ಈ ವಾಹನಗಳ ಸಂಚಾರವನ್ನು ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಅವರು ಉದ್ಘಾಟಿಸಿದರು.
ಟಾಟಾ ಮೋಟರ್ಸ್ ಇದುವರೆಗೆ ದೇಶದ ಹಲವು ನಗರಗಳಿಗೆ 1500 ಕ್ಕೂ ಹೆಚ್ಚು ಬಸ್ ಗಳನ್ನು ಪೂರೈಕೆ ಮಾಡಿದೆ. ಈ ಬಸ್ ಗಳು 10 ಕೋಟಿ ಕಿಲೋಮೀಟರ್ ಗೂ ಅಧಿಕ ದೂರದವರೆಗೆ ಕ್ರಮಿಸಿದ್ದು, ಶೇ.95 ರಷ್ಟು ಕಾರ್ಯಕ್ಷಮತೆಯನ್ನು ಹೊಂದಿರುವುದನ್ನು ಸಾಬೀತುಪಡಿಸಿವೆ. ಟಾಟಾ ಅಲ್ಟ್ರಾ ಇವಿ ಒಂದು ಕಟ್ಟಿಂಗ್ ಎಡ್ಜ್ ಇ-ಬಸ್ ಆಗಿದ್ದು ನಗರ ಪ್ರದೇಶದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿವೆ.
ಇದರ ಪೂರ್ಣ ಎಲೆಕ್ಟ್ರಿಕ್ ಡ್ರೈವ್ ಟೋನ್ ನೊಂದಿಗೆ ಈ ಅತ್ಯಾಧುನಿಕ ವಾಹನಗಳು ಶಕ್ತಿ ಬಳಕೆಯನ್ನು ಉತ್ತಮಗೊಳಿಸುತ್ತವೆ. ಇವುಗಳು ಕಡಿಮೆ ಶಕ್ತಿಯ ಅಂದರೆ ವಿದ್ಯುತ್ ಬಳಕೆ ಮತ್ತು ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡುತ್ತವೆ. ಈ ಬಸ್ ನ ಬೋರ್ಡಿಂಗ್ ಸುಲಭವಾಗಿದ್ದು, ಆರಾಮದಾಯಕವಾದ ಆಸನ ವ್ಯವಸ್ಥೆ ಮತ್ತು ಚಾಲಕಸ್ನೇಹಿ ಕಾರ್ಯಾಚರಣೆಗಳಂತಹ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಸಂಪೂರ್ಣವಾಗಿ ಶೂನ್ಯ ಮಾಲಿನ್ಯ ಹೊರಸೂಸುವಿಕೆಯನ್ನು ಖಚಿತಪಡಿಸುವುದರಿಂದ ಇದು ಪರಿಸರ ಸ್ನೇಹಿ ವಾಹನವಾಗಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್, ಏರ್ ಸಸ್ಪೆನ್ಷನ್, ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ (ITS) ಮತ್ತು ಪ್ಯಾನಿಕ್ ಬಟನ್ ನಂತಹ ಇನ್ನಿತರ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಹೊಂದಿದೆ. ಈ ಮೂಲಕ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಈ ಎಲೆಕ್ಟ್ರಿಕ್ ಬಸ್ ಸ್ವಚ್ಛವಾದ ಸಾರ್ವಜನಿಕ ಬದ್ಧತೆಯನ್ನು ಸಾಕಾರಗೊಳಿಸುತ್ತದೆ ಮತ್ತು ನಗರ ಪ್ರದೇಶದ ಪ್ರಯಾಣಿಕರ ಪ್ರಯಾಣದ ಅಗತ್ಯತೆಗಳಿಗೆ ಸೂಕ್ತವಾದ ಆಯ್ಕೆಯಾಗಿದೆ.