ಬಹಳಷ್ಟು ಜನರಲ್ಲಿ ಯಾವಾಗ ಅಂದರೆ ಆಗ ಮುಖ ತೊಳೆದುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಅದಕ್ಕೂ ಕೆಲವು ಪದ್ಧತಿಗಳಿವೆ. ಹೇಗೆಂದರೆ ಹಾಗೆ ತೊಳೆದುಕೊಂಡರೆ ಚರ್ಮ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ಮುಖ ತೊಳೆಯುವ ಮುನ್ನ ಕೈಗಳು ಹೇಗೆಂದರೆ ಹಾಗೆ ಇರಬಾರದು. ಕೈಗಳಲ್ಲಿ ಕೊಳೆ ಇಲ್ಲದಂತೆ ಎಚ್ಚರ ವಹಿಸಬೇಕು. ಕೈಗಳಲ್ಲಿರುವ ಬ್ಯಾಕ್ಟೀರಿಯಾ ವ್ಯಕ್ತಿಯ ಚರ್ಮಕ್ಕೆ ತಾಗಿದರೆ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಕೈಗಳನ್ನು ಸ್ವಚ್ಛ ಮಾಡಿಕೊಂಡ ಬಳಿಕವಷ್ಟೇ ಮುಖ ತೊಳೆಯಬೇಕು.
* ಮುಖ ತೊಳೆದುಕೊಳ್ಳಲು ಅತಿ ತಣ್ಣನೆಯ ಇಲ್ಲವೇ ಅತಿಯಾದ ಬಿಸಿ ನೀರನ್ನು ಬಳಸಬಾರದು. ಯಾವುದೇ ಸಮಯವಾಗಿರಲಿ ಉಗುರು ಬೆಚ್ಚಗಿನ ನೀರನ್ನು ಮುಖ ತೊಳೆದುಕೊಳ್ಳಲು ಬಳಸಬೇಕು.
* ಸ್ಕ್ರಬ್ ನಿಂದ ಮುಖ ತೊಳೆದ ಬಳಿಕ ಫೇಸ್ ವಾಷ್ ಬಳಸಬಾರದು. ತೆರೆದುಕೊಂಡ ರಂಧ್ರಗಳಲ್ಲಿ ತೀಕ್ಷ್ಣವಾದ ರಾಸಾಯನಿಕಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಸ್ಕ್ರಬ್ ಬಳಸಿದ ನಂತರ ಐಸ್ ಗಡ್ಡೆಯಿಂದ ಮೃದುವಾಗಿ ಮಸಾಜ್ ಮಾಡಿಕೊಳ್ಳಬೇಕು.
*ಮೇಕಪ್ ಮಾಡಿಕೊಳ್ಳುವ ಅಭ್ಯಾಸ ಹೊಂದಿರುವವರು ತಪ್ಪದೇ ಅದನ್ನು ತೆಗೆದು ಮುಖ ತೊಳೆದುಕೊಳ್ಳಬೇಕು. ಈ ರೀತಿ ಮಾಡದೇ ಇದ್ದಲ್ಲಿ ಗುಳ್ಳೆಗಳು ಸೇರಿದಂತೆ ಹಲವಾರು ಚರ್ಮ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
* ಕೂದಲು ತೊಳೆದುಕೊಂಡ ಪ್ರತಿಬಾರಿಯೂ ತಪ್ಪದೆ ಮುಖ ತೊಳೆಯಬೇಕು. ಕೆಲವರು ಪಾರ್ಲರ್ ನಲ್ಲಿ ಕಲರ್ ಹಚ್ಚಿಸಿಕೊಂಡು ನಂತರ ಕೇವಲ ಕೂದಲನ್ನು ಮಾತ್ರ ತೊಳೆಯುತ್ತಾರೆ. ಅದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ತಪ್ಪದೆ ಮುಖ ತೊಳೆದುಕೊಳ್ಳಲೇಬೇಕು.