alex Certify ಸುಜುಕಿ ಇಂಡಿಯಾದ ಹೊಸ ಶ್ರೇಣಿಗಳ ಬಿಡುಗಡೆ; ಇಲ್ಲಿದೆ ಇವುಗಳ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಜುಕಿ ಇಂಡಿಯಾದ ಹೊಸ ಶ್ರೇಣಿಗಳ ಬಿಡುಗಡೆ; ಇಲ್ಲಿದೆ ಇವುಗಳ ವಿಶೇಷತೆ

ಸುಜುಕಿ ಇಂಡಿಯಾ E-20 ಕಂಪ್ಲೈಂಟ್ ವಿ-ಸ್ಟಾರ್ಮ್​ (V-Strom) ಎಸ್​ಎಕ್ಸ್​ (SX) ಮತ್ತು ಗಿಕ್ಸರ್​ 250 (Gixxer 250)ಸರಣಿ ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್​ ಬಿಡುಗಡೆ ಮಾಡಿದೆ. ಸುಜುಕಿಯ ಎಲ್ಲಾ ದೇಶೀಯ ದ್ವಿಚಕ್ರ ವಾಹನ ಉತ್ಪನ್ನಗಳು ಶೇಕಡಾ 20ರವರೆಗೆ ಎಥೆನಾಲ್ ಮಿಶ್ರಣವನ್ನು ಹೊಂದಿರುವ ಪೆಟ್ರೋಲ್‌ನಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಕಂಪೆನಿ ಹೇಳಿದೆ.

ಪ್ರಸ್ತುತ, ಕಂಪೆನಿಯು ಇತ್ತೀಚೆಗೆ ಬಿಡುಗಡೆಯಾದ E20-ಕಂಪ್ಲೈಂಟ್ Gixxer ಸರಣಿ, ಆಕ್ಸೆಸ್ 125, ಅವೆನಿಸ್ ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ ಅನ್ನು ಅದರ ಅಧಿಕೃತ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡುತ್ತಿದೆ. ಇದೇ ತಿಂಗಳ 3 ನೇ ವಾರದಿಂದ, ಈ ಎಲ್ಲಾ ಸುಜುಕಿ ಪ್ರೀಮಿಯಂ ಡೀಲರ್‌ಶಿಪ್‌ಗಳಲ್ಲಿ ಮಾರಾಟ ಮಾಡಲಿದೆ.

ಈ ಸ್ಕೂಟರ್​ಗಳ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ದೇವಶಿಶ್ ಹಂಡಾ, “ಭಾರತ ಸರ್ಕಾರ ನೀಡಿರುವ ಅವಧಿಗಿಂತಲೂ ಮೊದಲೇ ಈ ದ್ವಿಚಕ್ರ ವಾಹನಗಳು ಮುಂಚೂಣಿಗೆ ಬಂದಿವೆ. ನಾವು ನಮ್ಮ ಗ್ರಾಹಕರ ವೈವಿಧ್ಯಮಯ ಬೇಡಿಕೆಗಳನ್ನು ಪೂರೈಸುವುದನ್ನು ಮುಂದುವರೆಸುತ್ತೇವೆ, ಜವಾಬ್ದಾರಿಯುತ ಕಂಪನಿಯಾಗಿ ನಾವು ಸ್ವಚ್ಛ ಮತ್ತು ಹಸಿರು ನಾಳೆಗಾಗಿ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಬದ್ಧರಾಗಿದ್ದೇವೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...