ಪ್ಯಾಕ್ಡ್ ʼಫ್ರೂಟ್ ಜ್ಯೂಸ್‌ʼನಲ್ಲಿನ ಸಕ್ಕರೆ ಆರೋಗ್ಯಕ್ಕೆ ಅಪಾಯಕಾರಿ; ಕುಡಿಯುವ ಮುನ್ನ ಇರಲಿ ಎಚ್ಚರ….!

ಹಣ್ಣಿನ ರಸವನ್ನು ಸಾಮಾನ್ಯವಾಗಿ ಆರೋಗ್ಯಕರ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕ್ ಮಾಡಿದ ಜ್ಯೂಸ್‌ಗಳು ಸ್ವಲ್ಪ ವಿಭಿನ್ನ. ಇವುಗಳ ರುಚಿ ಹೆಚ್ಚಿಸಲು ಸಕ್ಕರೆಯನ್ನು ಸೇರಿಸಲಾಗುತ್ತದೆ. ಅದನ್ನು ಹಲವಾರು ದಿನಗಳವರೆಗೆ ಸಂಗ್ರಹಿಸಲು ಸಂರಕ್ಷಕಗಳನ್ನು ಸಹ ಬಳಸಲಾಗುತ್ತದೆ. ಸಕ್ಕರೆ ಬೆರೆಸಿದ ಜ್ಯೂಸ್‌ ಆರೋಗ್ಯಕ್ಕೆ ಒಳ್ಳೆಯದಲ್ಲ. ವಿಶೇಷವಾಗಿ ಚಿಕ್ಕ ಮಕ್ಕಳು ಈ ಪ್ಯಾಕ್ಡ್‌ ಜ್ಯೂಸ್‌ ಅನ್ನು ತುಂಬಾ ಇಷ್ಟಪಡುತ್ತಾರೆ.

ಆದರೆ ಈ ಜ್ಯೂಸ್‌ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ಯಾಕ್‌ ಮಾಡಿದ ಹಣ್ಣಿನ ರಸದಲ್ಲಿ ಸೇರಿಸಲಾದ ಸಕ್ಕರೆಯು ಅನೇಕ ರೋಗಗಳಿಗೆ ಕಾರಣವಾಗಬಹುದು ಎಂದು ಹೇಳಿದರು. ಅವುಗಳಲ್ಲಿ ಪ್ರಮುಖವಾದವು,

ಮಧುಮೇಹ

ಹೃದಯ ರೋಗ

ಬುದ್ಧಿಮಾಂದ್ಯತೆ

ಆಲ್ಝೈಮರ್‌ ಕಾಯಿಲೆ

ಕೊಲೊನ್ ಕ್ಯಾನ್ಸರ್‌

ಅಧಿಕ ರಕ್ತದೊತ್ತಡ

ಅಧಿಕ ಕೊಲೆಸ್ಟ್ರಾಲ್‌

ಕಿಡ್ನಿ ಕಾಯಿಲೆ

ಯಕೃತ್ತಿನ ರೋಗ

ಬೊಜ್ಜು

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌

ರೆಟಿನಾ ಹಾನಿ

ಸ್ನಾಯುಗಳ ತೊಂದರೆಗಳು

ನರ ಹಾನಿ

ಹಲ್ಲುಗಳಲ್ಲಿ ಹುಳುಕು

ಉರಿಯೂತ

ಚರ್ಮದ ಸುಕ್ಕುಗಟ್ಟುವಿಕೆ

ಹಣ್ಣನ್ನು ಅದರ ಮೂಲ ರೂಪದಲ್ಲಿ ತಿನ್ನುವುದು ಉತ್ತಮ. ಆದರೆ ದ್ರವ ಆಹಾರವನ್ನು ಸೇವಿಸಬೇಕು ಎಂದಿದ್ದರೆ 100 ಪ್ರತಿಶತ ನೈಜ ಹಣ್ಣಿನ ರಸವನ್ನು ಕುಡಿಯಿರಿ. ಸಕ್ಕರೆ ಸೇರಿಸದೆಯೇ ಕುಡಿದಾಗ ಮಾತ್ರ ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತೀರಿ. ಇದರಿಂದ ಆರೋಗ್ಯಕ್ಕೂ ಹಾನಿಯಾಗದು. ಹಾಗಾಗಿ ಅಂಗಡಿಯಿಂದ ಬಾಟಲಿಯಲ್ಲಿರೋ ಫ್ರೂಟ್‌ ಜ್ಯೂಸ್‌ ಕೊಂಡು ತರುವ ಬದಲು ಮನೆಯಲ್ಲೇ ಫ್ರೆಶ್‌ ಆಗಿ ಜ್ಯೂಸ್‌ ಮಾಡಿಕೊಂಡು ಕುಡಿಯಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read