ಸಾಮಾಜಿಕ ಮಾಧ್ಯಮವು ಅಂತರ್ಜಾಲದಲ್ಲಿ ವೈರಲ್ ಆಗುವ ಅನೇಕ ಚಿತ್ರಗಳು ಮತ್ತು ಸವಾಲುಗಳನ್ನು ಹೊಂದಿದೆ.
ಜನಪ್ರಿಯ ಪ್ರೇರಕ ಭಾಷಣಕಾರ ಮತ್ತು ಉದ್ಯಮಿ ಡಾ. ವಿವೇಕ್ ಬಿಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸವಾಲನ್ನು ಒಳಗೊಂಡಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಜನರಿಗೆ ಸವಾಲು ಹಾಕಿದ್ದಾರೆ.
ಚಿತ್ರದಲ್ಲಿ ಅಸಮಾನವಾಗಿ ಹರಡಿರುವ ಮತ್ತು ಮಿಶ್ರವಾಗಿರುವ 10 ರೂ. ನೋಟುಗಳನ್ನು ಕಾಣಬಹುದು. ಚಿತ್ರವನ್ನು ಎಚ್ಚರಿಕೆಯಿಂದ ನೋಡುವಂತೆ ಜನರಿಗೆ ಅವರು ಹೇಳಿದ್ದಾರೆ. ಇದರಲ್ಲಿ ಹಲವಾರು 10 ರೂ. ನೋಟುಗಳಿವೆ. ಕೆಲವು ಹೊಸದು, ಇನ್ನು ಕೆಲವು ಹಳೆಯವು. ಇದರಲ್ಲಿ ಕೆಲವೊಂದು ನಕಲಿ ನೋಟುಗಳಿದ್ದು, ಇಂಥ ನೋಟುಗಳನ್ನು ಹುಡುಕುವುದೇ ಸವಾಲು.
ಅನೇಕ ಬಳಕೆದಾರರು ಸವಾಲನ್ನು ಸ್ವೀಕರಿಸಿದ್ದಾರೆ. ಅವರಲ್ಲಿ ಕೆಲವರು ನಕಲಿ ನೋಟು ಗುರುತಿಸಲು ವಿಫಲರಾಗಿದ್ದರೆ, ಕೆಲವರು ನೋಟಿನ ನಿಖರವಾದ ಸ್ಥಾನವನ್ನು ಸುಲಭವಾಗಿ ಕಂಡುಹಿಡಿದಿದ್ದಾರೆ. ಇದರಲ್ಲಿ ನೀವು ಅಸಲಿ, ನಕಲಿ ಕಂಡು ಹಿಡಿಯಬಲ್ಲಿರಾ ?