ಸಲ್ಮಾನ್ ಖಾನ್ ರನ್ನು ಭೇಟಿ ಮಾಡಲು ಬಯಸಿದ್ದ ನನ್ನನ್ನು ನಾಯಿಯಂತೆ ಹೊರಹಾಕಿದ್ರು; ʼದಬಾಂಗ್ 3ʼ ನಟಿಯ ಶಾಕಿಂಗ್ ಹೇಳಿಕೆ

ಸಲ್ಮಾನ್ ಖಾನ್ ಅವರ ಹೋಮ್ ಪ್ರೊಡಕ್ಷನ್ ʼದಬಾಂಗ್ 3ʼ ನಲ್ಲಿ ಕೆಲಸ ಮಾಡಿದ ನಟಿ ಹೇಮಾ ಶರ್ಮಾ ಅವರನ್ನು ಸಲ್ಮಾನ್ ಖಾನ್ ಜೊತೆ ಫೋಟೋ ತೆಗೆಸಿಕೊಳ್ಳಲು ಬಯಸಿದಾಗ ಅವರನ್ನು ಸೆಟ್ ನಿಂದ ಹೊರಗೆ ಹಾಕಲಾಗಿತ್ತಂತೆ. ಈ ಆಘಾತಕಾರಿ ವಿಷಯವನ್ನ ಅವರು ಹಂಚಿಕೊಂಡಿದ್ದು 2019 ರಲ್ಲಿ ಸೆಟ್‌ನಲ್ಲಿ ಫೋಟೋಗಾಗಿ ಸಲ್ಮಾನ್ ಖಾನ್ ರನ್ನ ಸಂಪರ್ಕಿಸಲು ಯತ್ನಿಸಿದಾಗ ಅವರ ಬೌನ್ಸರ್‌ಗಳಿಂದ ಹಲ್ಲೆಗೊಳಗಾಗಿದ್ದೆ ಎಂದಿದ್ದಾರೆ. .

ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಮತ್ತು 100 ಜನರ ಘಟಕದ ಮುಂದೆ ನಾಯಿಯಂತೆ ಹೊರಹಾಕಲಾಯಿತು ಎಂದು ಹೇಮಾ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ಹೇಮಾ ಅವರು ಸಲ್ಮಾನ್ ಅವರನ್ನು ಭೇಟಿಯಾಗಲು ಬಯಸಿದ್ದರಿಂದ ʼದಬಾಂಗ್ 3ʼ ನಲ್ಲಿ ಕೆಲಸ ಮಾಡಲು ತನ್ನ ಸಾಮರ್ಥ್ಯದಲ್ಲಿ ಎಲ್ಲವನ್ನೂ ಮಾಡಿದ್ದೇನೆ ಎಂದು ಹೇಳಿದರು. ಅವರು ಸಲ್ಲು ಜೊತೆ ಒಂದು ದೃಶ್ಯದಲ್ಲಿ ಕಾಣಿಸಿಕೊಳ್ಳಬೇಕಿತ್ತಂತೆ. ಆದರೆ ಆ ದೃಶ್ಯವನ್ನ ಸಲ್ಮಾನ್ ಇಲ್ಲದೇ ಚಿತ್ರೀಕರಿಸಲಾಗಿತ್ತು ಎಂದು ಹೇಮಾ ಹೇಳಿದ್ದಾರೆ.

ಇದರಿಂದ ನಾನು ತುಂಬಾ ನಿರಾಶೆಗೊಂಡಿದ್ದೆ ಮತ್ತು ಚಿತ್ರೀಕರಣ ಮುಗಿದ ನಂತರ ನಾನು ಸಲ್ಮಾನ್ ಸರ್ ಅವರನ್ನು ಭೇಟಿಯಾಗಲು ಬಯಸಿದ್ದೆ. ಆದರೆ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಮತ್ತು ಅವಮಾನಿಸಲಾಗಿದೆ ಎಂದಿದ್ದಾರೆ.

“ಸಲ್ಮಾನ್ ಸರ್ ಜೊತೆ ಸಂಪರ್ಕದಲ್ಲಿರಲು ನಾನು ಅನೇಕರನ್ನು ಸಂಪರ್ಕಿಸಿದ್ದೇನೆ. ಕನಿಷ್ಠ 50 ಜನರೊಂದಿಗೆ ಮಾತನಾಡಿದ್ದೇನೆ. ನಂತರ ನಾನು ʼಬಿಗ್ ಬಾಸ್‌ʼಗೆ ಬಂದ ಪಂಡಿತ್ ಜನಾರ್ದನ್ ಅವರನ್ನು ಸಂಪರ್ಕಿಸಿದೆ ಮತ್ತು ಸಲ್ಮಾನ್ ಸರ್ ಭೇಟಿಯಾಗುವ ಬಗ್ಗೆ ನನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದೆ. ಅವರನ್ನು ಭೇಟಿ ಮಾಡಿಸುವ ಬಗ್ಗೆ ನನಗೆ ಭರವಸೆ ನೀಡಿದರು. ನಂತರ ನಾವು ಸಲ್ಮಾನ್ ಸರ್ ಅವರನ್ನು ಭೇಟಿಯಾಗಲು ಹೋದೆವು. ನನ್ನನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಮತ್ತು ಅವಮಾನಿಸಲಾಗಿದೆ ಎಂದು ನಾನು ನಿಮಗೆ ಹೇಳಲಾರೆ, ನಾನು ಅವರೊಂದಿಗೆ ಒಂದು ಫೋಟೋ ಕ್ಲಿಕ್ ಮಾಡಲು ಬಯಸಿದ್ದರಿಂದ ನನ್ನನ್ನು ನಾಯಿಯಂತೆ ಹೊರಹಾಕಲಾಯಿತು.” ಎಂದು ಹೇಳಿದ್ದಾರೆ.

ಘಟನೆಯ ನಂತರ 10 ದಿನಗಳ ಕಾಲ ನನಗೆ ನಿದ್ರೆ ಬರಲಿಲ್ಲ ಎಂದು ಹೇಮಾ ಬೇಸರ ಹೊರಹಾಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read