ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದಿಂದ 5.11 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 5.11 ಲಕ್ಷಕ್ಕೂ ಅಧಿಕಾರಿ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 30.24 ಲಕ್ಷ ರೈತರಿಗೆ ತಲಾ 2,000 ರೂ. ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.
ಗದಗದಲ್ಲಿ 1,63,103, ಬಾಗಲಕೋಟೆ 97,908, ಬೆಳಗಾವಿ 29,195, ಬಳ್ಳಾರಿ 14,125, ಚಿಕ್ಕಮಗಳೂರು 16,183, ಚಿತ್ರದುರ್ಗ 11,810, ಧಾರವಾಡ 55,294 ಸೇರಿ 5,11,208 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ರೈತರಿಗೆ ತಾತ್ಕಾಲಿಕವಾಗಿ 2000 ರೂ. ಪರಿಹಾರ ನೀಡಿದ್ದು, ಕೇಂದ್ರದಿಂದ ಪರಿಹಾರ ಹಣ ಬಂದ ಕೂಡಲೇ ವಿತರಿಸಲಾಗುವುದು ಎಂದು ಹೇಳಿದ್ದಾರೆ.