
ತಿರುವನಂತಪುರಂ: ಟಾಟಾ ಸನ್ಸ್‌ನ ಗೌರವಾನ್ವಿತ ಅಧ್ಯಕ್ಷ ಮತ್ತು ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್ ಟಾಟಾ ಅವರು 86 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರ ನಿಧನಕ್ಕೆ ಐಬಿಎಸ್ ಸಾಫ್ಟ್ ವೇರ್ ಎಕ್ಸಿಕ್ಯೂಟಿವ್ ಚೇರ್ಮನ್ ವಿ.ಕೆ. ಮ್ಯಾಥ್ಯೂಸ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಐಬಿಎಸ್ ಸಾಫ್ಟ್ ವೇರ್ ಕಾರ್ಯನಿರ್ವಾಹಕ ಅಧ್ಯಕ್ಷ ವಿ.ಕೆ. ಮ್ಯಾಥ್ಯೂಸ್ ಅವರು ರತನ್ ಟಾಟಾ ಅವರೊಂದಿಗಿನ ಕೆಲವು ಮುಖಾಮುಖಿ ಘಟನೆಗಳ ಬಗ್ಗೆ ನೆನಪಿಸಿಕೊಂಡಿದ್ದಾರೆ.
ನನಗೆ ಹೆಚ್ಚು ಎದ್ದು ಕಾಣುವುದು ಟಾಟಾ ಅವರ ನಮ್ರತೆ, ಹಾಸ್ಯಪ್ರಜ್ಞೆ. ಗಂಭೀರ ಕ್ಷಣಗಳಲ್ಲಿಯೂ ಸಹ ಅವರನ್ನು ಇನ್ನಷ್ಟು ಪ್ರೀತಿಪಾತ್ರರನ್ನಾಗಿ ಮಾಡಿತು ಎಂದು ಮ್ಯಾಥ್ಯೂಸ್ ಹೇಳಿದ್ದಾರೆ.
ಯುಎಸ್ ಪ್ರವಾಸದ ಸಮಯದಲ್ಲಿ ರತನ್ ಟಾಟಾ ಅವರೊಂದಿಗೆ ಸ್ವಲ್ಪ ಸಮಯ ಕಳೆಯುವ ಅವಕಾಶ ನನಗೆ ಸಿಕ್ಕಿತು ಮತ್ತು ಆ ಭೇಟಿಯ ಎರಡು ಘಟನೆಗಳು ಯಾವಾಗಲೂ ನನ್ನೊಂದಿಗೆ ಉಳಿಯುತ್ತವೆ ಎಂದಿದ್ದಾರೆ.
ಒಂದು ದಿನ ಬೆಳಿಗ್ಗೆ ನಾವು ನ್ಯೂಯಾರ್ಕ್‌ನಲ್ಲಿರುವ ಅವರ ಸ್ವಂತ ಹೋಟೆಲ್‌ನಲ್ಲಿ ಒಟ್ಟಿಗೆ ಉಪಾಹಾರ ಸೇವಿಸಿದ್ದೇವೆ. ಆದರೂ, ಅವರ ಸೂಚನೆ ಮೇರೆಗೆ ಅಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಯೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲಿಲ್ಲ. ಇದು ಅವರ ನಮ್ರತೆ, ಸರಳತೆಗೆ ಸಾಕ್ಷಿಯಾಗಿಗಿತ್ತು ಎಂದು ಮ್ಯಾಥ್ಯೂಸ್ ತಿಳಿಸಿದ್ದಾರೆ.
ಅದೇ ದಿನದ ನಂತರ ನನ್ನ ಕುಟುಂಬ ಮತ್ತು ನಾನು ಮತ್ತೊಂದು ರೆಸ್ಟೋರೆಂಟ್‌ನಲ್ಲಿ ಅವರೊಂದಿಗೆ ಇದ್ದೆವು. ಆಶ್ಚರ್ಯವೆಂದರೆ ಅವರು ತಮ್ಮ ಕ್ರೆಡಿಟ್ ಕಾರ್ಡ್‌ನೊಂದಿಗೆ ಹಣ ಪಾವತಿಸುವ ಮೊದಲು ಆಹಾರದ ಬಿಲ್ ಅನ್ನು ವೈಯಕ್ತಿಕವಾಗಿ ಪರಿಶೀಲಿಸಿ ಸರಿಪಡಿಸಿದ್ದರು ಎಂದು ಮ್ಯಾಥ್ಯೂಸ್ ಹೇಳಿದರು.
‘ನಾನು ನಿನ್ನನ್ನು ಹಿಂಬಾಲಿಸುತ್ತಿದ್ದೇನೆಯೇ ಅಥವಾ ನೀವು ನನ್ನನ್ನು ಹಿಂಬಾಲಿಸುತ್ತಿದ್ದೀರಾ?’ ಎಂದು ಟಾಟಾ ಪ್ರಶ್ನಿಸಿದ್ದರು. ಸನ್ನಿವೇಶವನ್ನು ಲೆಕ್ಕಿಸದೆ ಇತರರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯ ಅವರಲ್ಲಿತ್ತು ಎಂದು ಸ್ಮರಿಸಿದ್ದಾರೆ.
ರತನ್ ಟಾಟಾ ಅವರು ಉದಯೋನ್ಮುಖ ಭಾರತದ ಶಕ್ತಿ, ಭರವಸೆ ಮತ್ತು ಯಶಸ್ಸನ್ನು ಸಾಕಾರಗೊಳಿಸಿದ ದೂರದೃಷ್ಟಿಯ ನಾಯಕರಾಗಿದ್ದರು. ಕೇವಲ ದಾರ್ಶನಿಕ ಉದ್ಯಮಿಗಿಂತಲೂ ಹೆಚ್ಚಾಗಿ ರತನ್ ಟಾಟಾ ಅವರು ಭಾರತದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಆಳವಾದ ಮತ್ತು ನೈಜವಾದ ಬದ್ಧತೆಯನ್ನು ಹೊಂದಿರುವ ನಾಯಕರಾಗಿದ್ದರು ಎಂದು ನವೀನ ಸ್ಟಾರ್ಟ್‌ಅಪ್‌ಗಳನ್ನು ಒಳಗೊಂಡಿರುವ ಗ್ರೂಪ್ ಆಫ್ ಟೆಕ್ನಾಲಜಿ ಕಂಪನಿಗಳ(ಜಿಟೆಕ್) ಅಧ್ಯಕ್ಷರೂ ಆಗಿರುವ ಮ್ಯಾಥ್ಯೂಸ್ ಹೇಳಿದ್ದಾರೆ.