HomeKarnatakaBIG NEWS: ಉದ್ಯಮಿಗೆ ವಂಚನೆ ಕೇಸ್: ಚೈತ್ರಾ ಹಾಗೂ ಗ್ಯಾಂಗ್ ಗೆ ಕೈದಿ ನಂಬರ್ ನೀಡಿದ...

BIG NEWS: ಉದ್ಯಮಿಗೆ ವಂಚನೆ ಕೇಸ್: ಚೈತ್ರಾ ಹಾಗೂ ಗ್ಯಾಂಗ್ ಗೆ ಕೈದಿ ನಂಬರ್ ನೀಡಿದ ಜೈಲಾಧಿಕಾರಿ

ಬೆಂಗಳೂರು: ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಚೈತ್ರಾ ಹಾಗೂ ಗ್ಯಾಂಗ್ ಗೆ ಜೈಲಾಧಿಕಾರಿಗಳು ಕೈದಿ ನಂಬರ್ ನೀಡಿದ್ದಾರೆ.

ವಂಚನೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಚೈತ್ರಾ ಹಾಗೂ ಗ್ಯಾಂಗ್ ನ ಸಿಸಿಬಿ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ನಿನ್ನೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್, ಚೈತ್ರಾ ಸೇರಿದಂತೆ 7 ಆರೋಪಿಗಳನ್ನು 14 ದಿನಗಳ ಕಾಲ ಅಕ್ಟೋಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಚೈತ್ರಾ ಹಾಗೂ ಗ್ಯಾಂಗ್ ನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಜೈಲಾಧಿಕಾರಿಗಳು ಆರೋಪಿಗಳಿಗೆ ಕೈದಿ ನಂಬರ್ ನೀಡಿದ್ದಾರೆ. ಎ 1 ಆರೋಪಿ ಚೈತ್ರಾಗೆ 9737 ನಂಬರ್ ನೀಡಲಾಗಿದ್ದು, ಮೋಹನ್ ಕುಲಾರ್ ಗೆ ಕೈದಿ ನಂಬರ್ 9738, ರಮೇಶ್ ಗೆ 9739, ಚೆನ್ನಾನಾಯ್ಕ್ ಗೆ 9740, ಧನರಾಜ್ ಗೆ 9741 ಕೈದಿ ನಂಬರ್ ನೀಡಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular