
ಸೂಕ್ಷ್ಮವಾಗಿ ನೋಡಿದಾಗ ರೈಲಿನ ಕೊನೆಯ ಕೋಚ್‌ನ ಹಿಂದಿನ “X” ಚಿಹ್ನೆ ಕಾಣಿಸುತ್ತದೆ. ಇದರ ವಿಷಯ ನಮಗೇಕೆ ಎಂದು ಸುಮ್ಮನೆ ಬಿಡುವವರೇ ಹೆಚ್ಚು. ಆದರೆ ಇದನ್ನು ಈಗ ರೈಲ್ವೇ ಸಚಿವಾಲಯ ಟ್ವಿಟರ್‌ನಲ್ಲಿ ವಿವರಿಸಿದೆ. ಈ ಚಿಹ್ನೆ ಏಕೆ ಬರೆಯುತ್ತಾರೆ ಎಂದು ತಲೆಕೆರೆದುಕೊಂಡಿದ್ದ ಪ್ರಯಾಣಿಕರಿಗೆ ಈಗ ಉತ್ತರ ಸಿಗುತ್ತದೆ.
ರೈಲ್ವೇ ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆಯ ಪೋಸ್ಟ್ ಪ್ರಕಾರ, ಹಳದಿ “X” ಚಿಹ್ನೆಯು ಯಾವುದೇ ಕೋಚ್‌ಗಳನ್ನು ಬಿಡದೆ ರೈಲು ಹಾದುಹೋಗಿದೆ ಎಂದು ಸೂಚಿಸುತ್ತದೆ. ಯಾವುದೇ ಕೋಚ್‌ಗಳನ್ನು ಬೇರ್ಪಡಿಸದೆ ರೈಲು ಸಂಪೂರ್ಣವಾಗಿ ಹಾದುಹೋಗಿದೆ ಎಂಬ ದೃಢೀಕರಣವನ್ನು ಪಡೆಯಲು ರೈಲ್ವೆ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.