alex Certify ಬಸ್ ಗೆ ಡಿಕ್ಕಿ ಹೊಡೆದ ರೈಲು; ಭೀಕರ ಅಪಘಾತದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಗೆ ಡಿಕ್ಕಿ ಹೊಡೆದ ರೈಲು; ಭೀಕರ ಅಪಘಾತದ ವಿಡಿಯೋ ವೈರಲ್

ಬಾಂಗ್ಲಾದೇಶದ ಢಾಕಾದ ಮಾಲಿಬಾಗ್ ಪ್ರದೇಶದಲ್ಲಿ ರೈಲು ಬಸ್‌ಗೆ ಡಿಕ್ಕಿ ಹೊಡೆದಿದೆ. ನಿನ್ನೆ ರಾತ್ರಿ 9.10ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಬುಧವಾರ ಪಂಚಗಢಕ್ಕೆ ತೆರಳುತ್ತಿದ್ದ ದ್ರುತಜನ್ ಎಕ್ಸ್ ಪ್ರೆಸ್ ಮಾಲಿಬಾಗ್ ರೈಲ್ವೆ ಗೇಟ್‌ನಲ್ಲಿ ಸೊಹಾಗ್ ಪರಿಬಹಾನ್ ಪ್ಯಾಸೆಂಜರ್ ಬಸ್‌ಗೆ ಡಿಕ್ಕಿ ಹೊಡೆದಿದೆ.

ಮಾಲಿಬಾಗ್ ಮತ್ತು ಮೌಚಕ್ ಪ್ರದೇಶಗಳಲ್ಲಿ ಪ್ರಯಾಣಿಕರು ಇಳಿದಿದ್ದರಿಂದ ಬಸ್ ಖಾಲಿಯಾಗಿತ್ತು. ರೈಲು ಬರುತ್ತಿರುವುದನ್ನು ಕಂಡ ಬಸ್ ಚಾಲಕ ಸೇರಿದಂತೆ ಬಸ್ ನಲ್ಲಿದ್ದ ಕೆಲವು ಮಂದಿ ಬಸ್ ನಿಂದ ಬೇಗನೆ ಕೆಳಗೆ ಇಳಿದರು. ಹೀಗಾಗಿ ಯಾವುದೇ ಸಾವು-ನೋವು ಅಥವಾ ಗಾಯಗಳ ವರದಿಯಾಗಿಲ್ಲ .

ಬಸ್ ಮತ್ತು ರೈಲು ಡಿಕ್ಕಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡ್ತಿದೆ. ಅಪಘಾತದಿಂದ ಢಾಕಾ ಮತ್ತು ಬಾಂಗ್ಲಾದೇಶದ ಇತರ ಭಾಗಗಳ ನಡುವಿನ ರೈಲು ಸಂಪರ್ಕವು ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿತು. ರಾತ್ರಿ 11 ಗಂಟೆಗೆ ರೈಲು ಹಳಿಯಿಂದ ಬಸ್ ತೆಗೆದ ನಂತರ ರೈಲು ಸಂಚಾರ ಮತ್ತೆ ಆರಂಭವಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...