ಲೋಕಸಭೆ ಚುನಾವಣೆ ವೇಳೆ ತಮ್ಮ ಗಡ್ಡ ಟ್ರಿಮ್ ಮಾಡಿದ್ದ ಕ್ಷೌರಿಕನಿಗೆ ಅಗತ್ಯವಿರುವ ಗಿಫ್ಟ್ ಕಳುಹಿಸಿದ ರಾಹುಲ್ ಗಾಂಧಿ

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ತಮ್ಮ ಗಡ್ಡ ಮತ್ತು ಕೂದಲನ್ನು ಟ್ರಿಮ್ ಮಾಡಿದ ರಾಯ್ ಬರೇಲಿ ಕ್ಷೇತ್ರದಲ್ಲಿನ ಕ್ಷೌರಿಕನ ಅಂಗಡಿಗೆ ಸುಮಾರು ಮೂರು ತಿಂಗಳ ನಂತರ ರಾಹುಲ್ ಗಾಂಧಿ ಉಡುಗೊರೆ ಕಳುಹಿಸಿದ್ದಾರೆ. ಗಿಫ್ಟ್ ಪಡೆದ ಬಳಿಕ ಕ್ಷೌರಿಕ ಮಿಥುನ್ ಸಂತಸ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ರಾಯ್ ಬರೇಲಿ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮೇ 13 ರಂದು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಲಾಲ್ ಗಂಜ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಹೊರಡುವಾಗ ಬ್ರಿಜೇಂದ್ರ ನಗರದಲ್ಲಿರುವ ಕ್ಷೌರಿಕ ಮಿಥುನ್ ಅಂಗಡಿಯಲ್ಲಿ ರಾಹುಲ್ ಗಾಂಧಿ ತಮ್ಮ ಗಡ್ಡವನ್ನು ಟ್ರಿಮ್ ಮಾಡಿಸಿಕೊಂಡಿದ್ದರು.

ಈ ಘಟನೆಯ ಮೂರು ತಿಂಗಳಿಗೂ ಹೆಚ್ಚು ಸಮಯದ ನಂತರ ರಾಹುಲ್ ಗಾಂಧಿ ಎರಡು ಕುರ್ಚಿಗಳು, ಶಾಂಪೂ ಕುರ್ಚಿ, ಇನ್ವರ್ಟರ್ ಸೆಟ್ ಇತ್ಯಾದಿಗಳನ್ನು ಮಿಥುನ್ ಗೆ ಉಡುಗೊರೆ ಕಳಿಸಿದ್ದಾರೆ. ವಾಹನಗಳಲ್ಲಿ ಉಡುಗೊರೆ ವಸ್ತುಗಳನ್ನು ತಂದಿದ್ದರು ಇವುಗಳನ್ನು ರಾಹುಲ್ ಗಾಂಧಿ ಅವರು ಕಳುಹಿಸಿದ್ದಾರೆ ಎಂದು ಮಿಥುನ್‌ಗೆ ತಿಳಿಸಿದ್ದರು. ಇದಕ್ಕೆ ಮಿಥುನ್ ಸಂತೋಷಪಟ್ಟು ರಾಹುಲ್ ಗಾಂಧಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಯುಪಿ ಕಾಂಗ್ರೆಸ್‌ನ ವಕ್ತಾರ ಅಂಶು ಅವಸ್ತಿ, “ರಾಹುಲ್ ಗಾಂಧಿ ಯಾವಾಗಲೂ ವಿವಿಧ ವರ್ಗದ ಜನರನ್ನು ಭೇಟಿಯಾಗುತ್ತಾರೆ, ಅವರ ಅಗತ್ಯತೆಗಳು ಮತ್ತು ಕೆಲಸವನ್ನು ಅರ್ಥಮಾಡಿಕೊಳ್ಳುತ್ತಾರೆ. ಲೋಕಸಭೆ ಚುನಾವಣೆಯ ಸಮಯದಲ್ಲಿ ರಾಯ್ ಬರೇಲಿಯ ಲಾಲ್ ಗಂಜ್‌ನಲ್ಲಿರುವ ಮಿಥುನ್ ಅವರ ಸಲೂನ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಕೂದಲು ಮತ್ತು ಗಡ್ಡವನ್ನು ಟ್ರಿಮ್ ಮಾಡಿಸಿಕೊಂಡಿದ್ದರು. ಇದೀಗ ರಾಹುಲ್ ಗಾಂಧಿ ಅವರು ಮಿಥುನ್ ಅವರ ಕೆಲಸಕ್ಕೆ ಬೇಕಾದ ಶಾಂಪೂ ಕುರ್ಚಿ, ಎರಡು ಕುರ್ಚಿಗಳು ಮತ್ತು ಇನ್ವರ್ಟರ್ ಬ್ಯಾಟರಿ ಸೇರಿದಂತೆ ಕ್ಷೌರಿಕನಿಗೆ ಉಡುಗೊರೆ ಕಳುಹಿಸಿದ್ದಾರೆ .

ರಾಹುಲ್ ಗಾಂಧಿ ಅವರು ಇಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅವರ ಪ್ರೇರಣೆಯಿಂದ ರಾಜಕೀಯ, ಸಾಮಾಜಿಕ ಕ್ಷೇತ್ರದ ಜನ, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕೂಡ ಈ ಕೆಲಸವನ್ನು ಮಾಡುತ್ತಾರೆ. ಈ ರೀತಿಯ ಬೆಂಬಲ ಮತ್ತು ಉತ್ತೇಜನ ನಮಗೆ ಹೆಮ್ಮೆಯ ವಿಷಯವಾಗಿದೆ, ” ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಜುಲೈ 26 ರಂದು ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ಸುಲ್ತಾನ್‌ಪುರದಿಂದ ಲಖನೌಗೆ ಹಿಂತಿರುಗುವಾಗ ಸುಲ್ತಾನ್‌ಪುರದ ಹೊರವಲಯದಲ್ಲಿರುವ ವಿಧಾಕ್ ನಗರದಲ್ಲಿರುವ ರಾಮ್ ಚೇತ್ ಅಂಗಡಿಗೆ ರಾಹುಲ್ ಗಾಂಧಿ ಅನಿರೀಕ್ಷಿತ ಭೇಟಿ ನೀಡಿದ್ದರು. ಅಲ್ಲಿ ಸ್ವಲ್ಪ ಸಮಯ ಕಳೆದ ಒಂದು ದಿನದ ನಂತರ, ಜುಲೈ 27 ರಂದು ಚಮ್ಮಾರ ರಾಮ್ ಚೇಟ್ ಅವರಿಗೆ ರಾಹುಲ್ ಗಾಂಧಿ ಹೊಲಿಗೆ ಯಂತ್ರವನ್ನು ಉಡುಗೊರೆಯಾಗಿ ಕಳಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read