ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ-ಖಾತಾ ವಿತರಣೆಗೆ ಮತ್ತಷ್ಟು ವೇಗ ನೀಡಲು ಖಾಸಗಿ ಸಂಸ್ಥೆ ನೇಮಕ

ಬೆಂಗಳೂರು: ಇ- ಖಾತಾ ವಿತರಣೆಗೆ ವೇಗ ನೀಡಲು ಬಿಬಿಎಂಪಿ ಕ್ರಮ ಕೈಗೊಂಡಿದ್ದು, ಖಾಸಗಿ ಸಂಸ್ಥೆಗಳ ಮೂಲಕ ಇ-ಖಾತಾ ವಿತರಣೆಗೆ ವೇಗ ನೀಡಲು ಚಿಂತನೆ ನಡೆಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆಗೆ ವೇಗ ನೀಡಲು ಖಾಸಗಿ ಸಂಸ್ಥೆ ನೇಮಿಸಲು ಚಿಂತನೆ ನಡೆಸಲಾಗಿದೆ. ಬಿಬಿಎಂಪಿ ದಾಖಲೆಗಳಂತೆ ನಗರದಲ್ಲಿ ಸುಮಾರು 22 ಲಕ್ಷ ಆಸ್ತಿಗಳಿದ್ದು, ಈ ಎಲ್ಲಾ ಆಸ್ತಿಗಳ ಕರಡು ಇ-ಖಾತಾ ಸಿದ್ಧಪಡಿಸಲಾಗಿದೆ. ಅಂತಿಮ ಇ-ಖಾತಾ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಬಿಬಿಎಂಪಿ ಕಂದಾಯ ಅಧಿಕಾರಿಗಳ ಕಚೇರಿ ಜೊತೆಗೆ ಬೆಂಗಳೂರು ಒನ್ ಕೇಂದ್ರದಿಂದಲೂ ಇ-ಖಾತಾ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ.

ಇದೀಗ ಇ-ಖಾತಾ ವಿತರಿಸಲು ಖಾಸಗಿ ಸಂಸ್ಥೆ ನೇಮಿಸಲು ಮುಂದಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಖಾಸಗಿ ಸಂಸ್ಥೆ ನೇಮಕ ಮಾಡುವ ಸಾಧ್ಯತೆ ಇದೆ. ಇ-ಖಾತಾ ವಿತರಣೆಗೆ ವೇಗ ನೀಡಲು ಆಸ್ತಿ ಮಾಲೀಕರು ಯಾರ ನೆರವು ಪಡೆಯದೆ ತಾವೇ ಇ-ಖಾತಾ ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ನಿಗದಿತ ವೆಬ್ಸೈಟ್ ನಲ್ಲಿ ಪಡೆಯಬಹುದು. ಈ ಬಗ್ಗೆ www.bbmpeasthi.karnataka.gov.in ವೆಬ್ಸೈಟ್ ನಲ್ಲಿ ಮಾಹಿತಿ ನೀಡಲಾಗಿದ್ದು, ಅದನ್ನು ಆಧರಿಸಿ ಆಸ್ತಿ ಮಾಲೀಕರು ನಿಗದಿತ ದಾಖಲೆಗಳನ್ನು ಸಲ್ಲಿಸಿ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read