alex Certify ಅನ್ನದಾತ ರೈತರಿಗೆ ಗುಡ್ ನ್ಯೂಸ್: ಫೆ. 24ರಂದು ಖಾತೆಗೆ 2 ಸಾವಿರ ರೂ. ಜಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ನದಾತ ರೈತರಿಗೆ ಗುಡ್ ನ್ಯೂಸ್: ಫೆ. 24ರಂದು ಖಾತೆಗೆ 2 ಸಾವಿರ ರೂ. ಜಮಾ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 24 ರಂದು ಬಿಹಾರದ ಭಾಗಲ್ಪುರಕ್ಕೆ ಭೇಟಿ ನೀಡಲಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಲಿದ್ದು, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೃಷಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯಡಿ, ಅರ್ಹ ರೈತರು ವರ್ಷಕ್ಕೆ 6,000 ರೂ.ಗಳ ಆರ್ಥಿಕ ಸಹಾಯವನ್ನು ತಲಾ 2,000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ಪಡೆಯುತ್ತಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಗೆ ಅರ್ಹತೆ

ಭಾರತೀಯ ನಾಗರಿಕ, ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು

ಸಾಗುವಳಿ ಭೂಮಿಯ ಮಾಲೀಕರಾಗಿರಬೇಕು

ತಿಂಗಳಿಗೆ ಕನಿಷ್ಠ 10,000 ರೂಪಾಯಿಗಳ ಪಿಂಚಣಿ ಪಡೆಯುವ ನಿವೃತ್ತರಾಗಿರಬಾರದು

ಆದಾಯ ತೆರಿಗೆಗೆ ಅರ್ಜಿ ಸಲ್ಲಿಸಿರಬಾರದು

ಸಾಂಸ್ಥಿಕ ಭೂಮಾಲೀಕರಾಗಿರಬಾರದು

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...