ಪಿಟ್‌ ಬುಲ್ ದಾಳಿಯಿಂದ ಗಾಯಗೊಂಡ ಬಾಲಕ; ಆಕ್ರೋಶದಿಂದ ಶ್ವಾನ ಹತ್ಯೆ ಮಾಡಿದ ಪೋಷಕರು

ಹರಿಯಾಣದ ಕರ್ನಾಲ್‌ನಲ್ಲಿ ಪಿಟ್‌ಬುಲ್ ನಾಯಿಯ ದಾಳಿಯಿಂದ 12 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಬಾಲಕನನ್ನು ವಸಂತ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಕರ್ನಾಲ್‌ನ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಂತ್ರಸ್ತನ ಕುಟುಂಬವು ಪೊಲೀಸರಿಗೆ ದೂರು ನೀಡಿದರೆ, ನಾಯಿ ಮಾಲೀಕರು ಸಂತ್ರಸ್ತ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ನಂತರ ನಾಯಿಯನ್ನು ಕೊಂದಿದ್ದಾರೆ ಎಂದು ಅದರ ಮಾಲೀಕರು ಆರೋಪಿಸಿದ್ದಾರೆ.

ಎರಡೂ ಕಡೆಯವರಿಂದ ಎರಡು ಪ್ರತ್ಯೇಕ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುನಕ್ ಗ್ರಾಮದ ನಿವಾಸಿ ಮೆಹರ್ ಸಿಂಗ್ ಎಂಬುವರು ನಾಯಿ ಮಾಲೀಕ ಫೂಲ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿಂದೆ ಹಲವಾರು ಮಂದಿಗೆ ನಾಯಿ ಕಚ್ಚಿದ್ದರಿಂದ ನಾಯಿಯನ್ನು ಕಟ್ಟಿ ಹಾಕುವಂತೆ ಫೂಲ್ ಸಿಂಗ್‌ಗೆ ಹಲವು ಬಾರಿ ಕೇಳಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

“ಭಾನುವಾರದಂದು ನಾಯಿ ಮಗುವಿನ ಮೇಲೆ ದಾಳಿ ಮಾಡಿ ಗೇಟ್‌ನಿಂದ ರಸ್ತೆಗೆ ಎಳೆದೊಯ್ದಿದೆ. ನಾವು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ಮಾಲೀಕರು ನಾಯಿಯನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದಿದ್ದಾರೆ” ಎಂದು ಸಿಂಗ್ ಹೇಳಿದ್ದಾರೆ.

ಮತ್ತೊಂದೆಡೆ ಫೂಲ್ ಸಿಂಗ್ ಕೂಡ ಪೊಲೀಸರಿಗೆ ದೂರು ನೀಡಿದ್ದು, ನಾಯಿ ಬಾಲಕನ ಮೇಲೆ ದಾಳಿ ಮಾಡಿದಾಗ ಬಾಲಕ ನಮ್ಮ ಮನೆಗೆ ಬಂದಿದ್ದ ಎಂದು ಹೇಳಿದ್ದಾರೆ. ನಾಯಿಯನ್ನು ಬಾಲಕನ ಕುಟುಂಬಸ್ಥರು ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read