ಇಂಡೋನೇಷಿಯಾ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಅಧಿಕೃತ ಅಭಿಮಾನಿ ಪುಟ ಎಂದು ಹೇಳಿಕೊಳ್ಳುವ ಇಂಡೋನೇಷ್ಯಾದ ಫೇಸ್ಬುಕ್ ಪೇಜ್ ಒಂದು ಪಠಾಣ್ ಕ್ರೇಜ್‌ನಲ್ಲಿರುವ ಇಂಡೋನೇಷಿಯಾದ ಅಭಿಮಾನಿಗಳ ವಿಡಿಯೋ ಶೇರ್ ಮಾಡಿಕೊಂಡಿದೆ.
ದೇಶದ ಬಂಡಂಗ್ ಪ್ರದೇಶದಲ್ಲಿ ದೊಡ್ಡ ಪರದೆಯ ಮೇಲೆ ಚಲನಚಿತ್ರವನ್ನು ಪ್ರದರ್ಶಿಸಲಾಗಿದ್ದು, ಜನರು ‘ಜೂಮೇ ಜೋ ಪಠಾಣ್’ ಹಾಡಿಗೆ ಹುಚ್ಚೆದ್ದು ಕುಣಿಯುತ್ತಿರುವುದನ್ನು ನೋಡಬಹುದಾಗಿದೆ. ಇಂಡೋನೇಷಿಯಾದ ಶಾರುಖ್ ಅಭಿಮಾನಿಗಳು ಚಲನಚಿತ್ರವನ್ನು ಆನಂದಿಸುವುದನ್ನು ನೋಡಬಹುದಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿದೇಶಗಳಲ್ಲಿಯೂ ಬಾಲಿವುಡ್ ತಾರೆಯರನ್ನು ಜನರು ಪ್ರೀತಿಸುವುದನ್ನು ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ. ವೈರಲ್ ವೀಡಿಯೊದಲ್ಲಿ ನಾವು ನೋಡುವಂತೆ ಶಾರುಖ್ ಅಭಿಮಾನಿಗಳು ದೊಡ್ಡ ಪರದೆಯ ಪಕ್ಕದಲ್ಲಿ ಟ್ರೆಂಡಿಂಗ್ ಹಾಡಿನ ನೃತ್ಯದ ಚಲನೆಯನ್ನು ಮರುಸೃಷ್ಟಿಸುವುದನ್ನು ಕಾಣಬಹುದು.
https://twitter.com/SRKFCI/status/1619695279867068418?ref_src=twsrc%5Etfw%7Ctwcamp%5Etweetembed%7Ctwterm%5E1619695279867068418%7Ctwgr%5E6760ae91ca9df054e278797d628397df79507f43%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fpathaan-craze-srk-fans-from-indonesia-dance-to-jhoome-jo-pathaan-in-a-bandung-theatre-watch-viral-video